Select Your Language

Notifications

webdunia
webdunia
webdunia
webdunia

ರಕ್ತದಾನದ ಮೂಲಕ ಕನ್ನಡ ರಾಜ್ಯೋತ್ಸವ

ರಕ್ತದಾನದ ಮೂಲಕ ಕನ್ನಡ ರಾಜ್ಯೋತ್ಸವ
bangalore , ಮಂಗಳವಾರ, 1 ನವೆಂಬರ್ 2022 (17:22 IST)
ಕನ್ನಡ ರಾಜ್ಯೋತ್ಸವ ಸಂಭ್ರಮ ರಾಜಧಾನಿ ಬೆಂಗಳೂರಿನಲ್ಲೂ ಮನೆ ಮಾಡಿದೆ. ಪ್ರತಿ ರಸ್ತೆಯಲ್ಲೂ ಕನ್ನಡದ ಭಾವುಟಗಳು ರಾರಾಜಿಸುತ್ತಿವೆ. ಆಟೊ ಚಾಲಕರಿಂದ ಹಿಡಿದು ವಿವಿಧ ಸಂಘಟನೆಗಳ ಮುಖಂಡರು ರಾಜ್ಯೋತ್ಸವ  ಆಚರಿಸುತ್ತಿದ್ದಾರೆ. ರಾಜ್ಯೋತ್ಸವ ಮತ್ತು ಪುನೀತ್‌ ರಾಜಕುಮಾರ್‌ ಸ್ಮರಣೆ ಕಾರ್ಯಕ್ರಮ ಒಟ್ಟೊಟ್ಟಿಗೆ ನಡೆಯುತ್ತಿದೆ. ರಾಜ್ಯೋತ್ಸವ ಮತ್ತು ಅಪ್ಪು ಸ್ಮರಣೆ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ಯಶವಂತಪುರದ ಮತ್ತಿಕೆರೆ ರಸ್ತೆಯಲ್ಲಿ ಕನ್ನಡಾಭಿಮಾನಿಗಳು ರಕ್ತದಾನ ಶಿಬಿರ ಆಯೋಜನೆ ಮಾಡಿದ್ರು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ರು. ಮೆಡಿಸ್ಕೋಪ್​​ ರಕ್ತನಿಧಿ ಕೇಂದ್ರಕ್ಕೆ ಬ್ಲಡ್​​​ ಡೊನೇಷನ್​​ ಮಾಡಲಾಯಿತು. ಕನ್ನಡಾಭಿಮಾನಿಗಳು ರಕ್ತದಾನ ಮಾಡಿ ಕನ್ನಡ ದಿನಾಚರಣೆ ನಡೆಸಿದ್ದು, ಜನಮನ ಸೆಳೆಯಿತು. 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಮಹಾ ಸುಳ್ಳ ಎಂದ ಶ್ರೀರಾಮುಲು