Publish Date: Thu, 11 May 2023 (10:34 IST)
Updated Date: Thu, 11 May 2023 (10:36 IST)
ಬೆಂಗಳೂರು : ಕರ್ನಾಟಕ ಚುನಾವಣೆಯ ಎಕ್ಸಿಟ್ ಪೋಲ್ ಲೆಕ್ಕಾಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಎಕ್ಸಿಟ್ ಪೋಲ್ಗಳನ್ನು ನಾನು ನಂಬುವುದಿಲ್ಲ. ನಾವು 141 ಸ್ಥಾನಗಳನ್ನು ದಾಟುತ್ತೇವೆ ಎಂಬ ಭರವಸೆ ಇದೆ. ಮಾಧ್ಯಮಗಳ ಲೆಕ್ಕಾಚಾರ ಬೇರೆ, ನಮ್ಮ ಲೆಕ್ಕಾಚಾರ ಬೇರೆ. ಈಗ ಮಾಧ್ಯಮಗಳು ತೋರಿಸುತ್ತಿರುವ ವರದಿಗಳು ಸುಳ್ಳಾಗುತ್ತವೆ.
ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಬರಲಿದೆ. ನಮಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.