Select Your Language

Notifications

webdunia
webdunia
webdunia
webdunia

ತನ್ನ ರಾಜ್ಯದಲ್ಲಿ ‘ಚಟ್ನಿ ಮ್ಯೂಸಿಕ್’ ಶುರು ಮಾಡಿಕೊಂಡಿರುವ ನಿತ್ಯಾನಂದ ಸ್ವಾಮಿ!

ತನ್ನ ರಾಜ್ಯದಲ್ಲಿ ‘ಚಟ್ನಿ ಮ್ಯೂಸಿಕ್’ ಶುರು ಮಾಡಿಕೊಂಡಿರುವ ನಿತ್ಯಾನಂದ ಸ್ವಾಮಿ!
ಬೆಂಗಳೂರು , ಶುಕ್ರವಾರ, 3 ಜುಲೈ 2020 (09:19 IST)
ಬೆಂಗಳೂರು: ಕೆರೆಬಿಯನ್ ದ್ವೀಪದಲ್ಲಿ ಪ್ರತ್ಯೇಕ ಭೂಮಿ ಖರೀದಿಸಿ ತನ್ನದೇ ರಾಜ್ಯ ಮಾಡಿಕೊಂಡಿರುವ ನಿತ್ಯಾನಂದ ಸ್ವಾಮಿಯ ಮತ್ತೊಂದು ಅವತಾರದ ಬಗ್ಗೆ ಗುಜರಾತ್ ಪೊಲೀಸರು ಬಹಿರಂಗಪಡಿಸಿದ್ದಾರೆ!


ಗುಜರಾತ್ ನಿಂದ ನಾಪತ್ತೆಯಾಗಿದ್ದ ಇಬ್ಬರು ಸಹೋದರಿಯರು ನಿತ್ಯಾನಂದನ ವಶದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇವರ ಪತ್ತೆಗೆ ಪೊಲೀಸರು ಶ್ರಮಿಸುತ್ತಿದ್ದಾರೆ. ಆ ಇಬ್ಬರೂ ಸಹೋದರಿಯರೂ ಸದ್ಯಕ್ಕೆ ನಿತ್ಯಾನಂದ ತಾನೇ ಸೃಷ್ಟಿಸಿಕೊಂಡಿರುವ ‘ಕೈಲಾಸ’ ರಾಜ್ಯದಲ್ಲಿದ್ದಾರೆ ಎನ್ನಲಾಗಿದೆ.

ಈ ಸಹೋದರಿಯರು ಅಲ್ಲಿ ನಿತ್ಯಾನಂದ ಸೃಷ್ಟಿಸಿರುವ ‘ಚಟ್ನಿ ಮ್ಯೂಸಿಕ್’ ಕಲಿಯುತ್ತಿದ್ದಾರಂತೆ! ಅಷ್ಟಕ್ಕೂ ಇದೇನು ಚಟ್ನಿ ಮ್ಯೂಸಿಕ್ ಅಂತೀರಾ? ಕೆರೆಬಿಯನ್ ಸಮುದಾಯ ಮತ್ತು ಭೋಜ್ ಪುರಿ ಸಂಗೀತವನ್ನು ಮಿಕ್ಸ್ ಮಾಡಿ ನಿತ್ಯಾನಂದ ಸೃಷ್ಟಿಸಿಕೊಂಡಿರುವ ಹೊಸ ಬಗೆಯ ಸಂಗೀತ ಇದಂತೆ. ಇದಕ್ಕೆ ನಿತ್ಯಾನಂದ ಚಟ್ನಿ ಮ್ಯೂಸಿಕ್ ಎಂದು ಹೆಸರಿಟ್ಟಿದ್ದಾನೆ!

ಇದೀಗ ಆತನ ಹಿಡಿತದಿಂದ ಸಹೋದರಿಯರನ್ನು ವಾಪಸ್ ಕರೆಸಿಕೊಳ್ಳಲು ಪೊಲೀಸರು ಶ್ರಮಿಸುತ್ತಿದ್ದಾರೆ. ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಪಡೆಯಲು ಪ್ರಯತ್ನ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದ್ದಕ್ಕೆ ಮಾಹಿತಿ ತಂತ್ರಜ್ಞಾನ ಖಾತೆ ಸಚಿವರು ಹೇಳಿದ್ದೇನು?