Publish Date: Sat, 18 Apr 2020 (19:05 IST)
Updated Date: Sat, 18 Apr 2020 (19:08 IST)
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ ಅನುಮತಿ ಪಡೆದುಕೊಂಡೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಮದುವೆ ನಡೆದಿದೆ.
ನಿಖಿಲ್ ಮದುವೆಯಲ್ಲಿ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಯಾವುದೇ ನಿಯಮ ಮುರಿದಿಲ್ಲ. ಹೀಗಂತ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಿಖಿಲ್ ಮದುವೆ ಅತ್ಯಂತ ಸರಳವಾಗಿ ನಡೆದಿದ್ದು, ಇದಕ್ಕಾಗಿ ತಾವು ಅಭಿನಂದನೆ ಸಲ್ಲಿಸೋದಾಗಿ ತಿಳಿಸಿದರು.
ಇನ್ನು, ನಿಖಿಲ್ ಅವರದ್ದು ದೊಡ್ಡ ಕುಟುಂಬ. ಆದರೂ ಸರಳವಾಗಿ ಮದುವೆಯಾಗಿ ಮಾದರಿಯಾಗಿದ್ದಾರೆ. ಕುಮಾರಸ್ವಾಮಿಯವರು ತಮ್ಮ ಮಗನ ಮದುವೆಯನ್ನು ಲಾಕ್ ಡೌನ್ ಪರಿಸ್ಥಿತಿಯಲ್ಲಿ ಸರಳವಾಗಿ ಆಯೋಜನೆ ಮಾಡಿರುವುದಕ್ಕೆ ಅಭಿನಂದಿಸುವುದಾಗಿ ಸಿಎಂ ಹೇಳಿದ್ದಾರೆ.