Select Your Language

Notifications

webdunia
webdunia
webdunia
webdunia

ಕೊರೊನಾ ಲಾಕ್ ಡೌನ್ : ಮುಸ್ಲಿಂ ಯೂಥ್ ಮಾಡ್ತಿರೋದೇನು?

ಕೊರೊನಾ ಲಾಕ್ ಡೌನ್ : ಮುಸ್ಲಿಂ ಯೂಥ್ ಮಾಡ್ತಿರೋದೇನು?
ಹಾಸನ , ಶನಿವಾರ, 18 ಏಪ್ರಿಲ್ 2020 (18:36 IST)
ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆಯಾಗಿದೆ. ಹೀಗಾಗಿ ಮುಸ್ಲಿಂ ಯುಥ್ ನವರು ಈ ಕೆಲಸ ಮುಂದುವರಿಸಿದ್ದಾರೆ.

ಹಾಸನ ನಗರ ಹಾಗೂ ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ Give to life ಮತ್ತು ಮುಸ್ಲಿಂ ಯೂಥ್ ಅಸೋಸಿಯೇಷನ್  ಹಾಗೂ ಇತರೆ ಸ್ವಯಂ ಸೇವಾ ಸಂಘಗಳು ನಿರಾಶ್ರಿತರಿಗೆ, ಕಟ್ಟಡ ಕಾರ್ಮಿಕರು, ನಿರ್ಗತಿಕರಿಗೆ ಕೊರೋನಾ ಸೋಂಕಿನ ಕಾರಣದಿಂದಾಗಿ ಲಾಕ್ ಡೌನ್ ಆರಂಭವಾದ ದಿನದಿಂದ ನಿತ್ಯ ಸುಮಾರು 500 ರಿಂದ 1000 ಜನರಿಗೆ ಊಟ, ತಿಂಡಿ ಮತ್ತು ಕುಡಿಯುವ ನೀರನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.

ಹಾಸನ ನಗರದ ಬೀದಿ ಬದಿಯಲ್ಲಿ ಮಲಗುವವರಿಗೆ, ಜಿಲ್ಲಾಸ್ಪತ್ರೆಯಲ್ಲಿರುವ ರೋಗಿಗಳ ಸಂಬಂಧಿಕರಿಗೆ ಮತ್ತು ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಹಿರಿಸಾವೆ ಹಾಗೂ ಹಾಸನ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮಲಗುವ ಭೀಕ್ಷುಕರಿಗೆ ಪ್ರತಿದಿನ ಆಹಾರ ನೀಡುವ ಮೂಲಕ ಅವರ ಹಸಿವನ್ನು ನೀಗಿಸುವ ಕಾರ್ಯ ನಡೆಯುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳಗ್ಗೆ ಫ್ಲಾಟ್ ಗೆ ನುಗ್ಗಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಅತ್ಯಾಚಾರ