Publish Date: Wed, 08 May 2019 (20:05 IST)
Updated Date: Wed, 08 May 2019 (20:08 IST)
ಹೈವೋಲ್ಟೇಜ್ ಕದನಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ತಾರೆ.
ನಿಖಿಲ್ ಗೆಲ್ತಾರೆ ಅಂತ ಜೆಡಿಎಸ್ ಶಾಸಕ ಡಾ.ಅನ್ನದಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಅಂಬರೀಷ್ ಮೃತಪಟ್ಟಿದ್ದಾರೆ. ಸುಮಲತಾ ಮೇಲೆ ಅನುಕಂಪ ಇದೆ ಅಂತಾರೆ. ನಮಗೆ ಅನುಕಂಪಕ್ಕಿಂತ ಅಭಿವೃದ್ಧಿ ಮುಖ್ಯ. ಒಬ್ಬ ಪಕ್ಷೇತರ ಸಂಸದೆ ಗೆಲ್ಲೋದ್ರಿಂದ ಅಭಿವೃದ್ಧಿ ಏನೂ ಆಗಲ್ಲ.
ಸುಮಲತಾಗೆ ಅನುಕಂಪ ಇದೆ ಅಂತ ಪ್ರಧಾನಿ ಆದವ್ರು ಐದು ಕೋಟಿ ಹೆಚ್ಚುವರಿ ಅನುದಾನವನ್ನ ಕೊಡಲ್ಲ. ಸಾಮಾನ್ಯ ಸಂಸದನಿಗೂ ಒಂದೇ ಅನುದಾನ. ಅನುಕಂಪದಿಂದ ಗೆದ್ದವ್ರಿಗೂ ಒಂದೇ ಅನುದಾನ ಎಂದು ಸುಮಲತಾಗೆ ಟಾಂಗ್ ಕೊಟ್ರು.
ನಿಖಿಲ್ ಗೆದ್ರೆ ಅವ್ರಪ್ಪ ಸಿಎಂ ಆಗಿದ್ದು, ಹೆಚ್ಚಿನ ಅನುದಾನ ತರ್ತಾರೆ ಎಂದ್ರು. ನನ್ನ ಕ್ಷೇತ್ರದಲ್ಲಿ ನನ್ ಎದುರಾಳಿ ಆಗಿದ್ದವ್ರು ಮೈತ್ರಿ ಧರ್ಮ ಪಾಲಿಸಿಲ್ಲ. ನಿಖಿಲ್ ಗೆದ್ರೆ ರಾಹುಲ್ ಗಾಂಧಿ ಪ್ರಧಾನಿ ಆಗೋಕೆ ಸಹಾಯ ಆಗುತ್ತದೆ. ಮಂಡ್ಯದಲ್ಲಿ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ವಿರುದ್ಧ ಮತ ಹಾಕಿದ್ದಾರೆ. ಈ ಬಗ್ಗೆ ನಾನು ಸಿಎಂ ಕುಮಾರಸ್ವಾಮಿ, ದೇವೇಗೌಡ ಹಾಗೂ ಕಾಂಗ್ರೆಸ್ ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದೇನೆ ಎಂದ್ರು.