Select Your Language

Notifications

webdunia
webdunia
webdunia
webdunia

ಮುಂದಿನ ದಸರಾ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ: ಶೋಭಾ ಕರಂದ್ಲಾಜೆ

ಮುಂದಿನ ದಸರಾ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ: ಶೋಭಾ ಕರಂದ್ಲಾಜೆ
ಮೈಸೂರು , ಶುಕ್ರವಾರ, 29 ಸೆಪ್ಟಂಬರ್ 2017 (17:03 IST)
ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದು ಸಂಸದೆ ಶೋಭಾ ಕರಂದ್ಲಾಜೆ ಮಾವುತರು, ಕಾವಾಡಿಗಳಿಗೆ ಔತಣ ಕೂಟ ಏರ್ಪಡಿಸಿದ್ದರು.

ಆಯುಧ ಪೂಜೆ ಹಿನ್ನೆಲೆಯಲ್ಲಿ ದಸರಾ ಗಜಪಡೆಗೂ ಪೂಜೆ ಸಲ್ಲಿಸಲಾಯಿತು. ಅರಮನೆ ಆವರಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಅರಣ್ಯ ಅಧಿಕಾರಿಗಳು ಅರ್ಜುನ ನೇತೃತ್ವದ 15 ಆನೆಗಳಿಗೂ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ನಂತರ ಅರಮನೆ ಅಂಗಳದಲ್ಲಿ ಮಾವುತರಿಗೆ ಔತಣ ಕೂಟವಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಿಂದಲೂ ಶೋಭಾ ಕರಂದ್ಲಾಜೆ ಮಾವುತರು ಮತ್ತು ಕಾವಾಡಿಗಳಿಗೆ ಔತಣ ಆಯೋಜನೆ ಮಾಡುತ್ತಾ ಬಂದಿದ್ದಾರೆ.
webdunia

ಕವಾಡಿಗರಿಗೆ ಹಾಗೂ ಮಾವುತರಿಗೆ ಊಟ ಬಡಿಸಿದ ನಂತರ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಈ ಬಾರಿ ದಸರಾ ಯಶಸ್ವಿಯಾಗಲಿ. ಇಂದು ಸಂಜೆ ನಾಡಿಗೆ ಒಳಿತಾಗಲಿ ಎಂದು ಚಾಮುಂಡೇಶ್ವರಿ ಬೆಟ್ಟ ಹತ್ತುತ್ತೇನೆ. ಅಲ್ಲದೆ ಮುಂದಿನ ದಸರಾ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿ ಎಂದು ಬೆಟ್ಟ ಹತ್ತುತ್ತೇನೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್