Select Your Language

Notifications

webdunia
webdunia
webdunia
webdunia

ಸೇನಾಪಡೆಯಿಂದ ಏರ್ ಶೋ ಪೂರ್ವಭಾವಿ ಪ್ರದರ್ಶನ

ಸೇನಾಪಡೆಯಿಂದ ಏರ್ ಶೋ ಪೂರ್ವಭಾವಿ ಪ್ರದರ್ಶನ
ಮೈಸೂರು , ಗುರುವಾರ, 28 ಸೆಪ್ಟಂಬರ್ 2017 (18:42 IST)
ಮೈಸೂರು: ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಈ ಬಾರಿ ಭಾರತೀಯ ವಾಯುಸೇನೆ ವತಿಯಿಂದ ಏರ್ ಶೋ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಪೂರ್ವಭಾವಿ ಪ್ರದರ್ಶನ ಇಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಿತು.

ಭಾರತೀಯ ವಾಯುಸೇನೆ ಹೆಲಿಕಾಪ್ಟರ್‍ಗಳು ಆಗಸದಲ್ಲಿ ತಮ್ಮ ಕಸರತ್ತು ಪ್ರದರ್ಶಿಸಿದವು. ವಾಯುಸೇನೆಯ ಹೆಚ್ಎಎಲ್ ನಿರ್ಮಿತ ALH ಹೆಲಿಕಾಪ್ಟರ್, ಎಂಐ 17 ಹಾಗೂ ಎಂಐ 17 ವಿ5 ಹೆಲಿಕಾಪ್ಟರ್‍ಗಳು ಬಾನಂಗಳದಲ್ಲಿ ಬಿರುಸಿನಿಂದ ಹಾರಾಡಿದವು.

ವಾಯುಸೇನೆಯ 9 ಯೋಧರು ಸ್ಲಿತರಿಂಗ್ ಎಂಬ ಕಾರ್ಯಾಚರಣೆ ಪ್ರದರ್ಶಿಸಿದರು. ಎತ್ತರದಲ್ಲಿ ಹಾರುತ್ತಿದ್ದ ಹೆಲಿಕಾಪ್ಟರ್‍ನಿಂದ ನುಣುಪಾದ ಹಗ್ಗ ಕೆಳಗೆ ಬಿಟ್ಟು ಯೋಧರು ಜಾರಿಕೊಂಡು ತಮ್ಮ ಸನ್ನದ್ಧ ಸ್ಥಿತಿಯನ್ನು ಪ್ರದರ್ಶಿಸಿದರು. ವಾಯುಪಡೆಯ ಯೋಧರು ಪೆಟಲ್ ಡ್ರಾಪಿಂಗ್ ಮತ್ತು ಸ್ಕೈ ಡೈವಿಂಗ್ ಪ್ರದರ್ಶನ ನಾಳೆ ನಡೆಯುವ ಕಾರ್ಯಕ್ರಮದಲ್ಲಿ ನೀಡಲಿದ್ದಾರೆ.
webdunia

ಭೂದಳಕ್ಕೆ ಸೇರಿದ ಬೆಂಗಳೂರಿನ 30 ಜನರ ಟರ್ನಾಡೊ ತಂಡ ಬೈಕ್ ಗಳಲ್ಲಿ ಗಡಚಿಕ್ಕುವ ಶಬ್ದದೊಂದಿಗೆ 36 ಬಗೆಯ ಕಸರತ್ತು ಪ್ರದರ್ಶಿಸಿದರು.  ಮೈದಾನದಲ್ಲಿ ನೃತ್ಯಭ್ಯಾಸಕ್ಕೆಂದು ಬಂದಿದ್ದ ಸಾವಿರ ಸಂಖ್ಯೆಯ ಮಕ್ಕಳು ಸಾರ್ವಜನಿಕರು ವೀಕ್ಷಿಸಿ ಸಂಭ್ರಮಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದಸರಾ ಮೆರವಣಿಗೆಗೆ ಸಕಲ ಸಿದ್ಧತೆಯೂ ಭರದಿಂದ ಸಾಗಿದೆ: ರಂದೀಪ್