Publish Date: Thu, 28 Sep 2017 (06:43 IST)
Updated Date: Thu, 28 Sep 2017 (06:45 IST)
ನವದೆಹಲಿ: ಗಡಿಯಲ್ಲಿ ಗಡಿ ನಿಯಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪಾಕ್ ಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ. ‘ಆಪರೇಷನ್ ಅರ್ಜುನ್’ ಎಂಬ ಹೆಸರಿನಲ್ಲಿ ಪಾಕ್ ಗೆ ಪಾಠ ಕಲಿಸಲು ಮುಂದಾಗಿದೆ.
ಭಾರತದ ಗಡಿಗೆ ತಾಗಿಕೊಂಡಿರುವ ಪಾಕಿಸ್ತಾನದ ಐಎಸ್ಐ ಏಜೆಂಟ್ ಗಳು, ನಿವೃತ್ತ ಸೇನಾ ನಾಯಕರ ಮನೆ, ತೋಟದ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯೋಜನೆ ರೂಪಿಸಿದೆ.
ಈ ಅಧಿಕಾರಿಗಳಿಗೆ ಭಾರತದ ವಿರುದ್ಧ ದಾಳಿ ನಡೆಸಲು ಸಹಾಯವಾಗುವಂತೆ ಪಾಕಿಸ್ತಾನ ಮನೆ ಮಾಡಿಕೊಟ್ಟಿತ್ತು. ಇದೀಗ ಅದೇ ಮನೆಗಳ ಮೇಲೆ ಭಾರತೀಯ ಸೇನೆ ಗುರಿ ನೆಟ್ಟಿದೆ. ಮೂಲವೊಂದರ ಪ್ರಕಾರ ಬಿಎಸ್ಎಫ್ ಯೋಧರು ಸಣ್ಣ ಮತ್ತು ಮಧ್ಯಮ ಗಾತ್ರದ ಗುಂಡುಗಳನ್ನು ಬಳಸಿ ದಾಳಿ ನಡೆಸಿದೆ. ಇದರಲ್ಲಿ ಸುಮಾರು 11 ನಾಗರಿಕರು ಮತ್ತು 7 ಮಂದಿ ಗಡಿಭದ್ರತಾ ಪಡೆಯ ಅಧಿಕಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಭಾರತದ ಈ ದಾಳಿಗೆ ‘ಆಪರೇಷನ್ ಅರ್ಜುನ್’ ಎಂದು ಹೆಸರಿಡಲಾಗಿದ್ದು, ಇದು ಪಾಕ್ ಪಡೆಗಳ ಮೇಲೆ ಭಾರೀ ಹಾನಿ ಉಂಟುಮಾಡಿದೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಭಾರತದ ಈ ಹಠಾತ್ ಪ್ರತಿದಾಳಿಗೆ ಬೆಚ್ಚಿಬಿದ್ದಿರುವ ಪಾಕ್ ಬಿಎಸ್ಎಫ್ ನಿರ್ದೇಶಕರನ್ನು ಸಂಪರ್ಕಿಸಿ ದಾಳಿ ನಿಲ್ಲಿಸಲು ಮನವಿ ಮಾಡಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ