Select Your Language

Notifications

webdunia
webdunia
webdunia
webdunia

ನಾಡಹಬ್ಬ ದಸರಾಗೆ ಕ್ಷಣಗಣನೆ… ಕ್ಯಾಪ್ಟನ್ ಅರ್ಜುನನಿಗೆ ಭರ್ಜರಿ ತಾಲೀಮು

Jamboo savari
ಮೈಸೂರು , ಗುರುವಾರ, 28 ಸೆಪ್ಟಂಬರ್ 2017 (13:30 IST)
ಮೈಸೂರು: ವಿಶ‍್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇನ್ನೆರಡು ದಿನ ಮಾತ್ರ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಜಂಬೂಸವಾರಿಯ ಅಂತಿಮ ತಾಲೀಮು ನಡೆಯುತ್ತಿದೆ. ಅರ್ಜುನ ನೇತೃತ್ವದ ಗಜಪಡೆಗೆ ಭರ್ಜರಿ ತಾಲೀಮು ನೀಡಲಾಗ್ತಿದೆ.

ಅರಮನೆ ಆವರಣದಲ್ಲಿ ತಾಲೀಮು ನಡೆಯಿತು. ಶಾಸಕ ಎಂ.ಕೆ.ಸೋಮಶೇಖರ್ ಮರದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿ ವಿಗ್ರಹ ಹೊತ್ತ ಅರ್ಜುನನಿಗೆ ಪುಷ್ಪಾರ್ಚನೆ ಮಾಡಿದರು. ಇದೇವೇಳೆ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಮತ್ತಿತರು ಉಪಸ್ಥಿತರಿದ್ದರು.

ಅರ್ಜುನನಿಗೆ ಮರದ ಅಂಬಾರಿ ಹೊರಿಸಿ ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಅರ್ಜುನ ನಿರಾತಂಕವಾಗಿ ಮರದ ಅಂಬಾರಿ ಹೊತ್ತು ಸಾಗಿದ. ಅರ್ಜುನನಿಗೆ ಕುಮ್ಕಿ ಆನೆಗಳು ಸಾಥ್ ನೀಡಿದವು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಅಡಳಿತ ಪಕ್ಷದ ವಿರುದ್ಧ ಬಿಜೆಪಿ ಆಕ್ರೋಶ