Publish Date: Fri, 29 Sep 2017 (13:10 IST)
Updated Date: Fri, 29 Sep 2017 (13:11 IST)
ತಿಪ್ಪರಲಾಗ ಹಾಕಿದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋಲ್ಲ. ಬಿಜೆಪಿ ಮಾಡಿದ ಅನಾಹುತಗಳನ್ನು ಜನತೆ ಮರೆತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ
ಮುಂದಿನ ದಸರಾ ವೇಳೆಗೆ ಯಡಿಯೂರಪ್ಪ ಸಿಎಂ ಎನ್ನುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಮಿಷನ್ 150 ಎನ್ನುವ ಭ್ರಮೆಯಲ್ಲಿದ್ದಾರೆ
ಮಿಷನ್ 150 ಅನ್ನುವುದು ಭ್ರಮೆ. ಬಿಜೆಪಿ ನಾಯಕರು ಕೇವಲ ಭ್ರಮೆಯ ಅಲೆಯಲ್ಲಿ ತೇಲುತ್ತಿದ್ದಾರೆ. ಕೇಂದ್ರದ ನೀತಿಯಿಂದಾಗಿ ದೇಶದ ಜಿಡಿಪಿ ಕುಸಿದಿದೆ. ಮೋದಿ ಸರಕಾರದಿಂದ ದೇಶದ ಸಾಮಾನ್ಯ ಜನತೆಯ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೇಯರ್ ಸಂಪತ್‌ರಾಜ್ ಮತ್ತು ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ನನ್ನನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.