Select Your Language

Notifications

webdunia
webdunia
webdunia
webdunia

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಹುದ್ದೆಗೆ ಹೊಸಬರ ನೇಮಕಾತಿ ಸಾಧ್ಯತೆ

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಹುದ್ದೆಗೆ ಹೊಸಬರ ನೇಮಕಾತಿ ಸಾಧ್ಯತೆ
ಬೆಂಗಳೂರು , ಗುರುವಾರ, 29 ಆಗಸ್ಟ್ 2019 (11:13 IST)
ಬೆಂಗಳೂರು : ರಾಜ್ಯ ಬಿಜೆಪಿಯ ಪ್ರಮುಖ ಸ್ಥಾನಗಳ ಬದಲಾವಣೆ ಮಾಡಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ  ಪ್ರಧಾನ ಕಾರ್ಯದರ್ಶಿಗಳ ಹುದ್ದೆಗೆ ಹೊಸಬರ ನೇಮಕಾತಿ ಸಾಧ್ಯತೆ ಇದೆ ಎನ್ನಲಾಗಿದೆ.




ಬಿಜೆಪಿಯಲ್ಲಿ ಒಬ್ಬರಿಗೆ ಒಂದೇ ಹು‌ದ್ದೆ ಎನ್ನುವ ಕಾರಣದಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿಯವರನ್ನು ವಿಮುಕ್ತಿಗೊಳಿಸಿಕಿ ಅವರ ಸ್ಥಾನಕ್ಕೆ ಹೊಸಬರನ್ನು ನೇಮಿಸಲಾಗುತ್ತಿದೆ ಎನ್ನಲಾಗಿದೆ. ಅಲ್ಲದೇ ಅರವಿಂದ ಲಿಂಬಾವಳಿ ಸಚಿವರಾಗುವ ನಿರೀಕ್ಷೆ ಇರುವ ಹಿನ್ನಲೆ  ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ಬಿಡುಗಡೆ ಮಾಡಿ ಮಂತ್ರಿಗಿರಿ ಜೊತೆಗೆ ರಾಷ್ಟ್ರಮಟ್ಟದಲ್ಲಿ ಜವಬ್ದಾರಿ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


ಹಾಗೇ ಐವರು ಪ್ರಧಾನ ಕಾರ್ಯದರ್ಶಿಗಳ ಪೈಕಿ 2 ರಿಂದ 3ಸ್ಥಾನಗಳಿಗೆ ಹೊಸಬರ ನೇಮಕಾತಿ ಮಾಡಲಾಗುತ್ತಿದ್ದು, ಹಾಲಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ವಿಜಯೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಲು ಆಸಕ್ತಿ ತೋರಿದ ಹಿನ್ನಲೆ  ಪ್ರಧಾನ ಕಾರ್ಯದರ್ಶಿಗಳ ಲಿಸ್ಟ್ ನಲ್ಲಿ ಸಿಎಂ ಪುತ್ರನಿಗೂ ಮಣೆ ಹಾಕಲಾಗಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಟಿಎಂ ವಂಚನೆ ಪ್ರಕರಣ ತಡೆಯಲು ಎಸ್‌.ಎಲ್.​ಬಿಸಿ ಯಿಂದ ಹೊಸ ಕ್ರಮ ಜಾರಿ