Select Your Language

Notifications

webdunia
webdunia
webdunia
webdunia

ಎಟಿಎಂ ವಂಚನೆ ಪ್ರಕರಣ ತಡೆಯಲು ಎಸ್‌.ಎಲ್.​ಬಿಸಿ ಯಿಂದ ಹೊಸ ಕ್ರಮ ಜಾರಿ

ಎಟಿಎಂ ವಂಚನೆ ಪ್ರಕರಣ ತಡೆಯಲು ಎಸ್‌.ಎಲ್.​ಬಿಸಿ ಯಿಂದ ಹೊಸ ಕ್ರಮ ಜಾರಿ
ನವದೆಹಲಿ , ಗುರುವಾರ, 29 ಆಗಸ್ಟ್ 2019 (10:56 IST)
ನವದೆಹಲಿ : ದಿಲ್ಲಿ ಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ (ಎಸ್‌.ಎಲ್.​ಬಿಸಿ) ಎಟಿಎಂನಿಂದ ಎರಡು ಬಾರಿ ಹಣ ತೆಗೆಯಲು 6 ರಿಂದ 12ಗಂಟೆಗಳ ಕಾಲಮಿತಿ ನಿಗದಿಪಡಿಸುವಂತೆ ಬ್ಯಾಂಕುಗಳಿಗೆ ಶಿಫಾರಸ್ಸು ಮಾಡಿದೆ.




ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಎಟಿಎಂ ಪ್ರಕರಣಗಳು ಹೆಚ್ಚಾಗುತ್ತಿದ್ದು, 2018-19ರ ಅವಧಿಯಲ್ಲಿ ದೆಹಲಿಯಲ್ಲೇ 179 ಎಟಿಎಂ ವಂಚನೆ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಎಟಿಎಂಗಳಲ್ಲಿನ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ದಿಲ್ಲಿ ಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ(ಎಸ್‌.ಎಲ್​.ಬಿಸಿ) ಈ ಹೊಸ ಕ್ರಮ ಕೈಗೊಳ್ಳಲು ಬ್ಯಾಂಕುಗಳಿಗೆ ಸೂಚಿಸಿದೆ.


ಒಂದು ಬಾರಿ ಎಟಿಎಂನಿಂದ ನಗದು ವಿತ್​ಡ್ರಾ ಮಾಡಿದ ಬಳಿಕ ಮತ್ತೊಮ್ಮೆ ಹಣ ತೆಗೆಯಲು 6 ರಿಂದ 12 ಗಂಟೆಗಳ ಅಂತರ ಇಡಲಾಗುತ್ತದೆ. ಎಟಿಎಂಗಳಲ್ಲಿ ಬಹುತೇಕ ವಂಚನೆಗಳು ಪ್ರಕರಣಗಳು ರಾತ್ರಿ ಮತ್ತು ಮಧ್ಯರಾತ್ತಿ ವೇಳೆ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಈ ರೀತಿಯ ನಿಯಮದ ಅವಶ್ಯಕತೆ ಇದೆ. ಹೀಗಾಗಿ ನಗದು ವಿತ್​ ಡ್ರಾ ಕಾಲಮಿತಿ ಜಾರಿಗೆಗೊಳಿಸುವ ಪ್ರಸ್ತಾವನೆ ಮುಂದಿಡಲಾಗಿದೆ ಎಂದು ಎಸ್.​ಎಲ್.​ಬಿಸಿ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೈಕಮಾಂಡ್ ಬೆದರಿಕೆಗೆ ಮಣಿದ್ರಾ ಶಾಸಕ ಉಮೇಶ್ ಕತ್ತಿ?