Select Your Language

Notifications

webdunia
webdunia
webdunia
webdunia

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತೆ ರದ್ದು

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತೆ ರದ್ದು
ನವದೆಹಲಿ , ಸೋಮವಾರ, 26 ಆಗಸ್ಟ್ 2019 (13:33 IST)
ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತೆ (ಎಸ್ ​ಪಿಜಿ) ವಾಪಾಸ್​ ಪಡೆದಿರುವುದಾಗಿ ಗೃಹ ಸಚಿವಾಲಯ ಮಾಹಿತಿ ನೀಡಿದೆ.




ದೇಶದ ಪ್ರಮುಖ ಹುದ್ದೆಗಳಲ್ಲಿ ಇರುವ ಆಯ್ದ ಗಣ್ಯ ವ್ಯಕ್ತಿಗಳಿಗೆ ಎಸ್​ಪಿಜಿ ಭದ್ರತೆ ಒದಗಿಸಲಾಗುತ್ತದೆ. ಎಸ್ ​ಪಿಜಿಯಲ್ಲಿ ಸುಮಾರು 3000 ಸಿಬ್ಬಂದಿಗಳಿದ್ದಾರೆ. ಪ್ರಾಣಕ್ಕೆ ಆಪತ್ತಿರುವ ಗಣ್ಯರಿಗೆ ಎಸ್​ ಪಿಜಿ ಭದ್ರತೆ ಒದಗಿಸುತ್ತದೆ.ಹಾಗೇ ಅವರಿಗೆ ಇರುವ ಬೆದರಿಕೆಯ ಪ್ರಮಾಣ ಆಧರಿಸಿ ನಿಯತಕಾಲಿಕವಾಗಿ ಬದಲಾವಣೆ ಮಾಡಲಾಗುತ್ತದೆ.


ಈ ಕುರಿತು ಮಾಹಿತಿ ನೀಡಿರುವ ಗೃಹ ಸಚಿವಾಲಯ, ಈ ಬಾರಿ ಮರುಪರಿಶೀಲನೆ ಮಾಡಿದ ಸಂದರ್ಭ ಮನಮೋಹನ್ ಸಿಂಗ್ ಅವರಿಗೆ ಅಗತ್ಯವಿರುವ ಭದ್ರತೆ ಪ್ರಮಾಣದ ಮೌಲ್ಯಮಾಪನವನ್ನು ತಜ್ಞರು ಮಾಡಿದ್ದು, ಅದರ ಅನ್ವಯ ಅವರ ಭದ್ರತೆಯನ್ನು ಎಸ್ ಪಿಜಿ ಯಿಂದ Z+ ಗೆ ಇಳಿಸಲು ನಿರ್ಧರಿಸಲಾಗಿದೆ. ಇನ್ಮುಂದೆ ಮನಮೋಹನ್ ಸಿಂಗ್ ರಕ್ಷಣೆಗೆ ಸಿಆರ್ ಪಿಎಫ್ ಸಿಬ್ಬಂದಿ ನಿಯೋಜಿಸಲ್ಪಡುತ್ತಾರೆ ಎಂದು ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮಣ ಸವದಿಗೆ ಡಿಸಿಎಂ ಹುದ್ದೆ ರೇಸ್ ನಿಂದ ಹಿಂದೆ ಸರಿಯಲು ಸಿಎಂ ಹೇಳಿದ್ದೇಕೆ?