Publish Date: Tue, 01 Jan 2019 (19:54 IST)
Updated Date: Tue, 01 Jan 2019 (19:56 IST)
ಬಂದರು ನಗರಿ ಮಂಗಳೂರಿನಲ್ಲಿ ಜನರು ಹೊಸ ವರುಷವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸ್ ರು ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.
ನಗರದ ಹೋಟೆಲ್, ಪಬ್ ಗಳಲ್ಲಿ ಯುವ ಸಮುದಾಯ ಸಿನಿಮಾ ಹಾಡುಗಳಿಗೆ ಸಖತ್ ಡ್ಯಾನ್ಸ್ ಮಾಡಿದರು. ಹಾಡು ಹಾಗೂ ಡ್ಯಾನ್ಸ್ ಗಮನ ಸೆಳೆಯಿತು. ಕರಾವಳಿಯ ಮೀನಿನ ಖಾದ್ಯಗಳು ವಿಶೇಷ ಆಕರ್ಷಣೆ ಆಗಿತ್ತು.
ವಿದೇಶಿಯರು ಕೂಡ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡರು.12 ಗಂಟೆ ಬಳಿಕ ಯಾವುದೇ ಆಚರಣೆಗೆ ಪೊಲೀಸರು ಅವಕಾಶ ನೀಡಲಿಲ್ಲ. ರಾತ್ರಿ 8 ಗಂಟೆ ಬಳಿಕ ಬೀಚ್ ಗಳಲ್ಲೂ ಸಾರ್ವಜನಿಕರಿಗೆ ಅವಕಾಶ ನೀಡಲಿಲ್ಲ. ಪೊಲೀಸ್ ಕೈಗೊಂಡಿರುವ ಕ್ರಮಕ್ಕೆ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಯಿತು.