Publish Date: Tue, 01 Jan 2019 (12:23 IST)
Updated Date: Tue, 01 Jan 2019 (12:24 IST)
ಬೆಂಗಳೂರು : ವಿದೇಶಿ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಪುಲ್ ಗರಂ ಆಗಿದ್ದಾರೆ.
ಸಿಎಂ ಹಾಗೂ ಶಾಸಕರು ಹೊಸ ವರ್ಷದ ಆಚರಣೆ ಮಾಡಲು ವಿದೇಶಕ್ಕೆ ತೆರಳಿದ್ದು, ಈ ಬಗ್ಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು,’ ರೈತರ ಹಿತಕಾಯಬೇಕಾದವರು ವಿದೇಶದಲ್ಲಿದ್ದಾರೆ’ ಎಂದು ಸಿಎಂ ವಿರುದ್ಧ ಪುಲ್ ಗರಂ ಆಗಿದ್ದಾರೆ.
‘ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಧಿಕಾರಸ್ಥರು ವಿದೇಶದಲ್ಲಿ ಮೋಜು ಮಸ್ತಿಗೆ ತೆರಳಿದ್ದಾರೆ.
ಮಗನ ಸಿನಿಮಾ ನೋಡಲು ವಿದೇಶಕ್ಕೆ ಹೋಗಿದ್ದಾರೆ. ಇಂತವರಿಗೆ ಜನರೇ ತಕ್ಕ ಪಾಠ ಕಲಿಸಬೇಕು’ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.