ಸೋಮವಾರ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತೇ ಗೊತ್ತಾ?

ಮಂಗಳವಾರ, 1 ಜನವರಿ 2019 (07:44 IST)
ಬೆಂಗಳೂರು : ಪ್ರತಿಯೊಂದು ವಾರಗಳಿಗೂ, ಗ್ರಹಗಳಿಗೂ ಸಂಬಂಧವಿರುತ್ತದೆ. ಆಯಾ ವಾರಗಳಿಗೆ ಆಯಾ ಗ್ರಹಗಳು ಅಧಿಪತಿಯಾಗಿರುತ್ತಾರೆ. ಆದ್ದರಿಂದ ಆ ವಾರ ಹುಟ್ಟಿದವರ ಮೇಲೆ ಅದಕ್ಕೆ ಸಂಬಂಧಪಟ್ಟ ಗ್ರಹದ ಪ್ರಭಾವವಿರುತ್ತದೆ. ಹಾಗಾದ್ರೆ ಸೋಮವಾರ ಹುಟ್ಟಿದವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳೊಣ.


ಸೋಮವಾರಕ್ಕೆ ಚಂದ್ರನು ಅಧಿಪತಿಯಾಗಿರುತ್ತಾನೆ. ಆದ್ದರಿಂದ ಸೋಮವಾರ ಜನಿಸಿದವರ ಮೇಲೆ ಚಂದ್ರನ ವಿಶೇಷ ಪ್ರಭಾವವಿರುತ್ತದೆ. ಇವರು ಚಂದ್ರನಂತೆ ಚಂಚಲ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇವರು ಸೌಮ್ಯಜೀವಿ, ದೇವರನ್ನು ಹೆಚ್ಚಾಗಿ ನಂಬುತ್ತಾರೆ. ಇವರಿಗೆ ಕಲೆ, ಸಾಹಿತ್ಯ, ರಾಜಕೀಯಶಾಸ್ತ್ರ, ಸಂಗೀತ, ನೃತ್ಯ, ಇಂತಹ ಕ್ಷೇತ್ರಗಳಲ್ಲಿ ಆಸಕ್ತಿ ಹೆಚ್ಚಾಗಿರುತ್ತದೆ. ಇವರು ಎಷ್ಟೇ ಕಷ್ಟಪಟ್ಟರು ಇವರು ಅಂದುಕೊಂಡ ಹಾಗೇ ಫಲಿತಾಂಶ ದೊರೆಯುವುದಿಲ್ಲ. ಆದರೆ ನಿರುತ್ಸಾಹ ಪಡದೆ ಮುಂದಕ್ಕೆ ಸಾಗುವ ಗುಣ ಇವರದು.  


ಇವರು ಜನಿಸಿದ ದಿನದಲ್ಲಿ ಅಮಾವಾಸ್ಯೆ  ಬಂದರೆ ಅಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿದರೆ ವಿಶೇಷ ಫಲವನ್ನು ಕಾಣಬಹುದು. ಸೋಮವಾರ ದಿನದಂದು ಆಗ್ನೇಯ ಮತ್ತು ಪಶ್ಚಿಮ ದಿಕ್ಕಿಗೆ ಪ್ರಯಾಣಿಸಿದರೆ ಲಾಭ. ಏಕೆಂದರೆ ಚಂದ್ರನು ಆಗ್ನೇಯದಲ್ಲಿದ್ದು ಪಶ್ಚಿಮ ದಿಕ್ಕನ್ನು ನೋಡುವನು. ಈ ದಿನ ಕಪ್ಪು ಮತ್ತು ನೀಲಿ ಉಡುಪನ್ನು ಧರಿಸಬೇಡಿ. ಬಿಳಿ ಬಣ್ಣದ ಉಡುಪನ್ನು ಧರಿಸಿದರೆ ಒಳ್ಳೆಯದು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಹೊಸ ವರ್ಷದಲ್ಲಿ ನಿಮ್ಮ ರಾಶಿಭವಿಷ್ಯ ಹೇಗಿದೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್