Select Your Language

Notifications

webdunia
webdunia
webdunia
webdunia

ಆಪ್ತ ಸಹಾಯಕನ ಕಿಡ್ನ್ಯಾಪ್‌ಗೆ ಯತ್ನ, ನೇಹಾ ತಂದೆ ನಿರಂಜನ್ ಆತಂಕ

niranjan hiremat

Sampriya

ಹುಬ್ಬಳ್ಳಿ , ಬುಧವಾರ, 19 ಜೂನ್ 2024 (18:12 IST)
ಹುಬ್ಬಳ್ಳಿ:  ಸ್ನೇಹಿತನಿಂದ ಹತ್ಯೆಗೀಡಾದ ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ್ ಅವರ ಆಪ್ತ ಸಹಾಯಕನನ್ನು ಅಪಹರಣ ಮಾಡಲು ಯತ್ನಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ.

ಇಂದು ಬೆಳಿಗ್ಗೆ ನಿರಂಜನ್ ಅವರ ಆಪ್ತ ಸಹಾಯಕ ವಿಜಯ್ ಅಲಿಯಾಸ್ ಈರಣ್ಣ ಅವರು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬೀದಿ ದೀಪ ಆಫ್ ಮಾಡಲು ಹೋದಾಗ  ಅವರನ್ನು ಮೂವರ ಗ್ಯಾಂಗ್​ ಅಪಹರಣ ಮಾಡಲು ಯತ್ನಿಸಿದೆ.

ಕಾರಲ್ಲಿ ಬಂದ ಮೂವರು ಕಾರು ಹತ್ತುವಂತೆ ಒತ್ತಾಯಿಸಿದ್ದಾರೆ. ನಾನು ಯಾಕೆ ಕಾರ್ ಹತ್ತುಬೇಕೆಂದು ವಿಜಯ್ ಭಯಗೊಂಡು ಜೇಬಿನಲ್ಲಿದ್ದ ಮೊಬೈಲ್ ತೆಗೆದು ವಿಡಿಯೋ ಮಾಡಲು ಮುಂದಾಗಿದ್ದಾರೆ. ಬಳಿಕ ಮೂವರು ವಿಜಯ್ ಕೈಯಿಂದ ತಪ್ಪಿಸಿಕೊಂಡ ಓಡಿ ಹೋಗಿದ್ದಾರೆ. ಹುಬ್ಬಳ್ಳಿಯ ಘಂಟಿಕೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಘಟನೆ ಬಳಿಕೆ ಪ್ರತಿಕ್ರಿಯಿಸಿದ ನಿರಂಜನ್ ಅವರು,  ಬೀದಿ ದೀಪ ಆಫ್​ ಮಾಡಲು ಹೋದಾಗ ನನ್ನ ಆಪ್ತ ಸಹಾಯಕ ಅಪಹರಣ ಮಾಡಲು ಪ್ರಯತ್ನ ಮಾಡಿದ್ದಾರೆ. ಮೂವರು ಬಂದು ಅಟ್ಯಾಕ್ ಮಾಡಿ ಅಪಹರಣ​ಗೆ ಯತ್ನ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಕ್ಕಾದಲ್ಲಿ ಏರುತ್ತಲೇ ಇದೆ ಬಿಸಿಗಾಳಿ, 550 ಹಜ್ ಯಾತ್ರಿಗಳು ದುರ್ಮರಣ