Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿ ಅಂಜಲಿ ಕೊಲೆ: ಕರ್ತವ್ಯ ಲೋಪದಲ್ಲಿ ಇಬ್ಬರು ಪೊಲೀಸರು ಅಮಾನತು

Hubballi Anjali

Sampriya

ಹುಬ್ಬಳ್ಳಿ , ಗುರುವಾರ, 16 ಮೇ 2024 (19:10 IST)
Photo Courtesy X
ಹುಬ್ಬಳ್ಳಿ: ಮದುವೆ ಪ್ರಸ್ತಾಪ ತಿರಸ್ಕರಿಸಿದಕ್ಕೆ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣ ಸಂಬಂಧ ಕರ್ತವ್ಯ ಲೋಪದ ಆರೋಪದಡಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಮಹಿಳಾ ಹೆಡ್ ಕಾನ್‌ಸ್ಟೆಬಲ್ ಅವರನ್ನು ಅಮಾನತುಗೊಳಿಸಲಾಗಿದೆ.

 ಬೆಂಡಿಗೇರಿ ಪೊಲೀಸ್ ಇನ್ಸ್‌ಪೆಕ್ಟರ್‌ ಚಂದ್ರಶೇಖರ ಚಿಕ್ಕೋಡಿ ಹಾಗೂ ಠಾಣೆಯ ಮುಖ್ಯಪೇದೆ ರೇಖಾ ಅವರನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತುಗೊಳಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್‌ ಅವರು ಆದೇಶಿಸಿದ್ದಾರೆ.

ಕೊಲೆಯಾದ ಅಂಜಲಿ ಅಂಬಿಗೇರ್ ಕುಟುಂಬದವರು ಆರೋಪಿ ವಿಶ್ವನಿಂದ ಜೀವ ಬೆದರಿಕೆ ಇರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು, ಪೊಲೀಸರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಹತ್ಯೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅಂಜಲಿ ಕುಟುಂಬಸ್ಥರು ಠಾಣೆಗೆ ಬಂದು ಹೋಗಿರುವುದಕ್ಕೆ ಠಾಣೆಯ ಸಿಸಿಟಿವಿ ದೃಶ್ಯಗಳು ಸಾಕ್ಷಿಯಾಗಿವೆ. ಹೀಗಾಗಿಯೇ ಇಬ್ಬರನ್ನೂ ಅಮಾನತು ಮಾಡಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀತಾ ಮಾತೆ ಮಂದಿರ ನಿರ್ಮಾಣಕ್ಕೆ 72.47 ಕೋಟಿ ಮೀಸಲು: ಅಮಿತ್ ಶಾ