ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹತ್ಯೆ ಕೇಸ್ ನ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಹತ್ಯೆಯ ಕಾರಣಗಳೇನು ಎಂಬುದನ್ನು ವಿವರವಾಗಿ ಉಲ್ಲೇಖಿಸಲಾಗಿದೆ. ಪ್ರೀತಿ ನಿರಾಕರಿಸಿದ್ದಕ್ಕೇ ಹತ್ಯೆ ಮಾಡಲಾಗಿದೆ ಎಂದು ಕಾರಣ ವಿವರಿಸಲಾಗಿದೆ.
ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸಿತ್ತು. ಇದೀಗ ವಿಚಾರಣೆ ಪೂರ್ತಿಗೊಳಿಸಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಫಯಾಜ್ ಹತ್ಯೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. 950 ಕ್ಕೂ ಹೆಚ್ಚು ಪುಟಗಳ ಆರೋಪ ಪಟ್ಟಿಯನ್ನು ಜೆಎಂಎಫ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ನೇಹಾ ಮತ್ತು ನಾನು ಹಳೆಯ ಸ್ನೇಹಿತರಾಗಿದ್ದೆವು. ನಾನು ಮನಸಾರೆ ಪ್ರೀತಿಸುತ್ತಿದ್ದೆ. ಆಕೆಗೂ ಪ್ರೀತಿಸುವಂತೆ ಕೋರಿದ್ದೆ. ಆದರೆ ಅದನ್ನು ಆಕೆ ನಿರಾಕರಿಸಿದ್ದರಿಂದ ಸಿಟ್ಟಾಗಿ ಹತ್ಯೆ ಮಾಡಿದ್ದೆ ಎಂದು ಫಯಾಜ್ ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.
ಘಟನೆ ಬಗ್ಗೆ ನೇಹಾ ಪೋಷಕರು, ಪ್ರತ್ಯಕ್ಷ ಸಾಕ್ಷಿಗಳು, ಸ್ನೇಹಿತರ ಹೇಳಿಕೆಗಳು ಸೇರಿದಂತೆ 80 ಕ್ಕೂ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. 23 ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ 23 ವರ್ಷದ ನೇಹಾ ಹಿರೇಮಠ್ ರನ್ನು ಏಪ್ರಿಲ್ 18 ರಂದು ಕಾಲೇಜು ಆವರಣದಲ್ಲೇ ಫಯಾಜ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಳು. ಆರೋಪಿ ಫಯಾಜ್ ನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೊಪ್ಪಿಸಿದ್ದರು.