Webdunia - Bharat's app for daily news and videos

Install App

ನೈಸರ್ಗಿಕ ಮಾವು ಮೇಳಕ್ಕೆಚಾಲನೆ ರೈತರಿಂದ ನೇರವಾಗಿ ಗ್ರಾಹಕರಿಗೆ

Webdunia
ಶುಕ್ರವಾರ, 3 ಜೂನ್ 2022 (20:33 IST)
ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಷ್ಠಾನವು ಮಲ್ಲೇಶ್ವರ ಸಮೀಪದ ಸರಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿರುವ ಮೂರು ದಿನಗಳ (ಜೂ 4ರಿಂದ 6) ನೈಸರ್ಗಿಕ ಮಾವು ಮೇಳಕ್ಕೆ ಯದುಗಿರಿ ಯತಿರಾಜ ಮಠದ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರು ಶುಕ್ರವಾರ ಚಾಲನೆ ನೀಡಿದರು.
 
ಶ್ರೀಗಳು, ಮೇಳದಲ್ಲಿ ಪಾಲ್ಗೊಂಡಿರುವ ಪ್ರತಿಯೊಂದು ಮಳಿಗೆಗೂ ತೆರಳಿ, ತಲಾ 5 ಕೆ.ಜಿ. ಮಾವಿನ ಹಣ್ಣು ಖರೀದಿಸುವ ಮೂಲಕ ವಿನೂತನ ಉತ್ತೇಜನಾ ಮಾದರಿಯಲ್ಲಿ ಮೇಳವನ್ನು ಉದ್ಘಾಟಿಸಿದರು.
 
ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಬೆಳೆದು, ನೈಸರ್ಗಿಕ ವಾಗಿ ಹಣ್ಣು ಮಾಡಿರುವ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ.
 
ಈ ಸಂದರ್ಭದಲ್ಲಿ ಅವರು, ಪಕ್ಕದ ಸರಕಾರಿ ಶಾಲೆಯ ಮಕ್ಕಳಿಗೆ ತಲಾ ಒಂದು ಮಾವಿನ ಹಣ್ಣನ್ನು ವಿತರಿಸಿ, ಖುಷಿ ಪಟ್ಟರು. ಜೊತೆಗೆ, ಮಳಿಗೆ ಹಾಕಿರುವ ಹಲವು ಪದವೀಧರ ರೈತರೊಂದಿಗೆ ಮಾತನಾಡಿ, ಅವರೆಲ್ಲರ ಕುಶಲೋಪರಿಯನ್ನು ವಿಚಾರಿಸಿದರು.
 
ಬಳಿಕ ಮಾತನಾಡಿದ ಶ್ರೀಗಳು, 'ನಿಸರ್ಗಸಹಜ ಹಣ್ಣುಗಳನ್ನು ಹಾಗೆಯೇ ಆಸ್ವಾದಿಸುವ ಪದ್ಧತಿ ಹಿಂದೆಲ್ಲ ಇತ್ತು. ಕ್ರಿಮಿನಾಶಕ ಮತ್ತು ಕೀಟನಾಶಕಗಳ ಅಡ್ಡ ಪರಿಣಾಮಗಳನ್ನು ಈಗ ಅರಿಯಲಾಗುತ್ತಿದ್ದು, ಪುನಃ ಸಾವಯವ ಕೃಷಿ ಮತ್ತು ಆಹಾರ ಸೇವನೆಗೆ ಮರುಜೀವ ಬರುತ್ತಿದೆ ಎಂದರು. ಮೇಳದ ಹಿನ್ನೆಲೆಯಲ್ಲಿ ಸರಕಾರಿ ಶಾಲಾ ಮೈದಾನದಲ್ಲಿ ಹಬ್ಬದ ಸಡಗರ ಮನೆಮಾಡಿತ್ತು.
 
ಕಾರ್ಯಕ್ರಮದಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ತಂದೆ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ದೀಪಕ್, ನಿವೃತ್ತ ಶಿಕ್ಷಕ ನಾರಾಯಣಪ್ಪ ಸಚಿವರ ಆಪ್ತ ಕಾರ್ಯದರ್ಶಿ ಮಾರುತಿ ಪ್ರಸನ್ನ, ಬಿಜೆಪಿ ಮಲ್ಲೇಶ್ವರಂ ಮಂಡಲದ ಅಧ್ಯಕ್ಷೆ ಕಾವೇರಿ ಕೇದಾರನಾಥ್, ಪಾಲಿಕೆ ಮಾಜಿ ಸದಸ್ಯ ಮಂಜುನಾಥ ರಾಜು, ಜಯಪ್ರಕಾಶ್,  ರಾಮನಗರ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮುನೇಗೌಡ ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments