Publish Date: Wed, 04 May 2022 (19:55 IST)
Updated Date: Wed, 04 May 2022 (19:57 IST)
ರಾಮನಗರ ದೊಡ್ಡಆಲಹಳ್ಳಿಯ ದೇವಾಲಯದಲ್ಲಿ ನೂತನ ವಿಗ್ರಹ ಸ್ಥಾಪನೆ ಹಿನ್ನೆಲೆ ಹುಟ್ಟೂರಿನ ದೇವಸ್ಥಾನದಲ್ಲಿ ನಡೆದ ಹೋಮ- ಹವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗಿಯಾದ್ರು. ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ರು. ಅಶ್ವಥ್ ನಾರಾಯಣ ಅತ್ಯಂತ ಭ್ರಷ್ಟ ರಾಜಕಾರಣಿಗಳಲ್ಲೊಬ್ಬರು. ಅದರಲ್ಲಿ ಅನುಮಾನ ಇಲ್ಲ, ನಾನು ಬ್ರಾಹ್ಮಣನ ತರ ಇದ್ದೀನಿ, ಶುದ್ಧ ರಾಜಕಾರಣಿ ಅನ್ನುವ ಅವರಿಗೆ ಇದೆಲ್ಲ ಯಾಕೆ ಬೇಕು. ಅವರ ಮಾತುಗಳನ್ನ ನೋಡಿದ್ರೆ ಯಾರು ಸಂಸ್ಕೃತಿ ಇರೋರು ಈ ರೀತಿ ಮಾಡಲ್ಲ ಎಂದರು.