Select Your Language

Notifications

webdunia
webdunia
webdunia
webdunia

ಮಹಾನಗರದಲ್ಲಿ ನಶೆ ಪುಂಡರ ಹಾವಳಿ

ಮಹಾನಗರದಲ್ಲಿ ನಶೆ ಪುಂಡರ ಹಾವಳಿ
bangalore , ಸೋಮವಾರ, 25 ಅಕ್ಟೋಬರ್ 2021 (22:13 IST)
ಬೆಂಗಳೂರು: ಮಹಾನಗರದಲ್ಲಿ ನಶೆ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಒಂದಿಲೊಂದು ಕಿರಿಕ್ ಮಾಡುತ್ತ ಜನರಿಗೆ ಕಾಟ ಕೊಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕೆಲ ಪುಂಡರು ಆಟವಾಡಲು ಬಂದ ಬಾಲಕರನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಹಿಂಸೆ ನೀಡುವ ಮೂಲಕ ಗಾಂಜಾ ಮತ್ತಿನಲ್ಲಿ ಕ್ರೂರಿ ವರ್ತನೆ ತೋರಿದ್ದಾರೆ.
ಬೆಂಗಳೂರಿನ ಕೆ.ಆರ್. ಪುರಂನ ದೇವಸಂದ್ರ ವಾರ್ಡ್ ಬಳಿ  ಘಟನೆ ನಡೆದಿದೆ. ಶಾಲೆಯ ಮೈದಾನಕ್ಕೆ ಆಟವಾಡಲು ಬಂದ ಬಾಲಕರನ್ನು ಕೆಲ ಯುವಕರ ಗುಂಪು ಹಿಂಸಿಸಿದೆ. ಆಟವಾಡಲು ಬಂದ ಬಾಲಕರನ್ನು ಯುವಕರು ಸುತ್ತುವರೆದು ಸತತ ಒಂದು ಗಂಟೆಗೂ ಅಧಿಕ ಅವಧಿ ಹಿಂಸೆ ನೀಡಿದ್ದಾರೆ. ಅಲ್ಲದೆ ಟಾರ್ಚರ್ ನೀಡುವುದನ್ನು ವಿಡಿಯೋ ಮಾಡಿ ಕುಚೇಷ್ಟೆ ಮೆರೆದಿದ್ದಾರೆ.
ಬಳಿಕ ಬಾಲಕರನ್ನು ಒಂದೆಡೆ ಕೂರಿಸಿ ಹಲ್ಲೆ ನಡೆಸಿ ಮರಕ್ಕೆ ಕಟ್ಟಿಹಾಕಿ ಬೀಡಿ ಸೇದುವಂತೆ ಹಿಂಸೆ ಮಾಡಿದ್ದಾರೆ. ಮಕ್ಕಳು ಕಣ್ಣೀರಿಡುತ್ತ ಎಷ್ಟೇ ಗೋಳಾಡಿದರು ಪುಂಡರ ಗ್ಯಾಂಗ್ ಬಾಲಕರನ್ನು ಬಿಡದೆ ಹಿಂಸಿಸಿದ್ದಾರೆ.
ಕೃತ್ಯ ಬಳಿಕ ಕಣ್ಣೀರು ಹಾಕುತ್ತ ಬಾಲಕರು ಮನೆಗೆ ತೆರಳಿದ್ದಾರೆ. ತಮ್ಮ ತಮ್ಮ ಪೊಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್ ಘಟನೆ ಸಂಬಂಧ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಸುಮೋಟೋ ಪ್ರಕರಣ ದಾಖಲಿಸಿ ಐವರ ಬಂಧನ:
ಇನ್ನು ಮಕ್ಕಳಿಗೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ರಾಜು(18) ಸೇರಿ ಐವರನ್ನು ಬೆಂಗಳೂರಿನ ಮಹದೇವಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಲಾಗಿದೆ. ಐವರು ಆರೋಪಿಗಳ ಪೈಕಿ ನಾಲ್ವರು ಅಪ್ರಾಪ್ತರು. ಸದ್ಯ ಮಹದೇವಪುರ ಪೊಲೀಸರಿಂದ ತನಿಖೆ ಮುಂದುವರೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ - ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ