Select Your Language

Notifications

webdunia
webdunia
webdunia
webdunia

ಮಹಾನಗರದಲ್ಲಿ ಬೆಂಬಿಡದೇ ಮಳೆ

ಮಹಾನಗರದಲ್ಲಿ ಬೆಂಬಿಡದೇ ಮಳೆ
bangalore , ಭಾನುವಾರ, 17 ಅಕ್ಟೋಬರ್ 2021 (22:40 IST)
ಮಹಾನಗರದಲ್ಲಿ ಬೆಂಬಿಡದೇ ಮಳೆಯಾಗುತ್ತಿದ್ದು, ಭಾನುವಾರವೂ ಕೂಡ ಮುಂದುವರಿದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 74 ಮಿ.ಮೀ ಮಳೆ ದಾಖಲಾಗಿದೆ.
ನಗರದ ಹಲವು ಭಾಗಗಳಲ್ಲಿ ಭಾನುವಾರ ಗುಡುಗು ಸಹಿತ ಜೋರು ಮಳೆಯಾಗಿದೆ. ಉಳಿದಂತೆ, ಬಹುತೇಕ ಎಲ್ಲ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.  ಮಳೆಯಿಂದ ಹಲವು ರಸ್ತೆ ಹಾಗೂ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದರಿಂದ ಜನ ಜೀವನ ಅಸ್ಥವ್ಯಸ್ಥವಾಗಿದೆ.
ನಂದಿನಿ ಬಡಾವಣೆ, ಗಾಯತ್ರಿನಗರ, ದಾಸರಹಳ್ಳಿ, ನಾಗಸಂದ್ರ, ಚೊಕ್ಕಸಂದ್ರ, ಆರ್.ಆರ್.ನಗರ, ಸಾರಕ್ಕಿ, ಕೆಂಗೇರಿ, ಹೆಮ್ಮಿಗೆಪುರ, ಪಟ್ಟಣಗೆರೆ, ಬಿಇಎಂಎಲ್ ಲೇಔಟ್, ನಾಗರಭಾವಿ, ಅಗ್ರಹಾರದಾಸರಹಳ್ಳಿ, ಗಾಳಿ ಆಂಜನೇಯ ದೇಗುಲ, ವಿದ್ಯಾಪೀಠ, ಅಂಜನಪುರ, ಬೊಮ್ಮನಹಳ್ಳಿ, ಕಾಟನಪೇಟ್, ರೇಸ್ ಕೋರ್ಸ್ ರಸ್ತೆ, ವಿಶ್ವೇಶ್ವರಪುರಂ, ಲಕ್ಕಸಂದ್ರ, ಕೋರಮಂಗಲ, ದೊಮ್ಮಲೂರು, ಶಿವಾಜಿನಗರ, ಹಲಸೂರು, ಬೆನ್ನಿಗಾನಹಳ್ಳಿ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಭಾರಿ ಮಳೆಗೆ ರಸ್ತೆ ಹಾಗೂ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಪರದಾಟ ನಡೆಸಿದರು.
ಮುಂದಿನ ಎರಡು ದಿನ ಮಳೆ:
ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಮುಂದಿನ ಎರಡು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ
ಎಲ್ಲೆಲ್ಲಿ ಎಷ್ಟೆಷ್ಟು ಮಳೆ:
ವಿಮಾನ ನಿಲ್ದಾಣ 74 ಮಿ.ಮೀ., ಆರ್ ಆರ್ ನಗರ 39 ಮಿ.ಮೀ, ಶಿವನಗರ 32 ಮಿ.ಮೀ., ಕಾಟನ್ ಪೇಟೆ 10.5 ಮಿ.ಮಿ., ನಾಗಾಪುರ 20.5 ಮಿ.ಮೀ., ಹಂಪಿನಗರ 11 ಮಿ.ಮೀ., ಎಚ್.ಗೊಲ್ಲಹಳ್ಳಿ 40ಮಿ.ಮೀ., ಬೊಮ್ಮನಹಳ್ಳಿ 15.5 ಮಿ.ಮೀ., ಕೋರಮಂಗಲ 24ಮಿ.ಮೀ., ಸಾರಕ್ಕಿ 25ಮಿ.ಮೀ., ಕೆಂಗೇರಿ 28 ಮಿ.ಮೀ., ಹೆಮ್ಮಿಗೆಪುರ 24 ಮಿ.ಮೀ., ಕೆ.ಜೆ.ಹಳ್ಳಿ 30 ಮಿ.ಮೀ., ಸುಳೇಕೆರೆ 28 ಮಿ.ಮೀ., ತಾವರಿಗೆರೆ 10 ಮಿ.ಮೀ., ಚನ್ನೇನಹಳ್ಳಿ 39.5 ಮಿ.ಮೀ., ಉತ್ತರ ಹಳ್ಳಿ 44‌ ಮಿ.ಮೀ., ಅಂಜನಾಪುರ 17 ಮಿ.ಮೀ., ಪುಲಕೇಶಿ ನಗರ 23.5 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದ ಸಿಬ್ಬಂದಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಕ್ಯಾಂಪೇನ್ ಮ್ಯಾನೇಜ್​ಮೆಂಟ್ ಕಂಪನಿಗಳ ಮೇಲೆ ಐಟಿ ದಾಳಿ