Publish Date: Fri, 01 Oct 2021 (22:16 IST)
Updated Date: Fri, 01 Oct 2021 (22:19 IST)
ಬೆಂಗಳೂರು: ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಅ. 4ರಿಂದ ಹೆಚ್ಚುವರಿ 100 ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ಬಸ್‌ಗಳೊಂದಿಗೆ ಇನ್ನೂ 100 ಬಸ್ ಕಾರ್ಯಾಚರಿಸಲಿವೆ.
ನಗರ ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ಉತ್ತಮ, ಸಮರ್ಪಕ ಹಾಗೂ ಸುರಕ್ಷಿತ ಸಾರಿಗೆ ಸೇವೆಯನ್ನು ಮಿತವ್ಯಯ ದರದಲ್ಲಿ ಒದಗಿಸುತ್ತಿದೆ. ವಿವಿಧ ಮಾರ್ಗಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹಾಗೂ ಅವರ ಹಿತದೃಷ್ಟಿಯಿಂದ ಸಾರಿಗೆ ಸೇವೆಗಳನ್ನು ಒದಗಿಸುತ್ತಿದೆ.
ಲಾಕ್‌ಡೌನ್ ಸಡಿಲಿಕೆಗೊಂಡ ನಂತರ ಪ್ರಯಾಣಿಕರಿಗೆ ಸಮರ್ಪಕ, ಸುರಕ್ಷಿತ ಸಾರಿಗೆ ಸೇವೆ ಒದಗಿಸಲು ಹಾಗೂ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಪುಸ್ತುತ ಸಾರಿಗೆ ಸಂಸ್ಥೆಯಲ್ಲಿ 4,953 ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ.