ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ನೇರ ನೇಮಕಾತಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಾನ್ಯ ರಾಜ್ಯಪಾಲರ ನಿರ್ದೇಶನದಂತೆ ಅಧಿಸೂಚನೆ ಹೊರಡಿಸಿದೆ. ಒಟ್ಟು 1242 ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಇದರಲ್ಲಿ 2015ರಲ್ಲಿ ನಡೆದ ನೇಮಕಾತಿ ವೇಳೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದೆ ಭರ್ತಿಯಾಗದಿರುವ 145 ಹುದ್ದೆಗಳೂ ಸೇರಿಸಿಕೊಳ್ಳಲಾಗಿದೆ.
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಯುಜಿಸಿ ವೇತನ ಶ್ರೇಣಿ 57,700/--182400/- ಆಗಿರುತ್ತದೆ.1242 ಹುದ್ದೆಗಳಿಗೆ ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸತಕ್ಕದ್ದು. ಅರ್ಜಿಗೆ ಯಾವುದೇ ಶು ಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ 31/10/2021ರ ವರೆಗೆ ಗಡುವು ನೀಡಲಾಗಿದೆ.ಈಗ ಒಟ್ಟು ಖಾಲಿ ಇರುವ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಶೇಕಡಾ 95ನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಉಳಿದ ಶೆ. 5ರಷ್ಟನ್ನು ಗ್ರೂಪ್-ಸಿ ವೃಂದದಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಆಯ್ಕೆ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಅಗತ್ಯ ಇರುವ ಪಠ್ಯ ಕ್ರಮವನ್ನು ಇಲಾಖೆಯಲ್ಲಿ ರಚಿಸಲ್ಪಟ್ಟ ಅಗತ್ಯವಿರುವ ಪಠ್ಯಕ್ರಮವನ್ನು ಇಲಾಖೆಯಲ್ಲಿ ರಚಿಸಲ್ಪಟ್ಟವಿವಿದ ವಿವಿಧ ವಿಷಯಗಳ ತಜ್ಞ ಸಮಿತಿಯಿಂದ ಸಿದ್ಧಪಡಿಸಲಾಗಿದೆ.ಈಗ ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಿಯಮಾನುಸಾರ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಮೆರಿಟ್ ಅಧಾರದ ಮೂಲಕ ಅಭ್ಯರ್ಥಿಗಳನ್ನು ಮೀಸಲಾತಿ (ನೇರ ಸಮತಳ) ಮತ್ತು ರೋಸ್ಟರ್ ಬಿಂದುಗಳನ್ವಯ ಆಯ್ಕೆ ಮಾಡಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸರ್ಕಾರಕ್ಕೆ ಸಲ್ಲಿಸಲು ಕರ್ನಾಟಕ ಉನ್ನತ ಶಿಕ್ಷಣ ಸಚಿವಾಲಯದ ಪ್ರಕಟಣೆ ತಿಳಿಸಿದೆ.