Publish Date: Fri, 01 Oct 2021 (21:40 IST)
Updated Date: Fri, 01 Oct 2021 (21:42 IST)
ಕೊರೋನಾ ಲಾಕ್ ಡೌನ್ ಬಳಿಕ ಇದೀಗ ಮತ್ತೆ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ.
ಇಂದಿನಿಂದ ಜಾರಿಯಾಗುವಂತೆ ಪ್ರತಿ ಲೀಟರ್ ಸಿಲಿಂಡರ್ ಮೇಲೆ ಹೆಚ್ಚುವರಿ 43.5 ರೂ. ನೀಡಬೇಕಾಗಿದೆ. ಹೀಗಾಗಿ ರೆಸ್ಟೋರೆಂಟ್, ದಾಬಾ, ಹೋಟೆಲ್ ಗಳಲ್ಲಿ ತಿಂಡಿ, ಊಟದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ತೂಗುವ ಪ್ರತಿ ಸಿಲಿಂಡರ್ ಬೆಲೆ 1,736 ರೂ. ಆಗಲಿದೆ.ಆದರೆ, 14.2 ಕೆಜಿ ತೂಗುವ ಸಿಲಿಂಡರ್ ಬೆಲೆ ಬದಲಾವಣೆ ಮಾಡಲಾಗಿಲ್ಲ. ಈ ಬಾರಿ ಗೃಹಬಳಕೆ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.