Publish Date: Thu, 16 Feb 2023 (19:48 IST)
Updated Date: Thu, 16 Feb 2023 (19:51 IST)
ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸುವುದರ ಕುರಿತು ಸಂಸದ ಬಿ.ವೈ.ರಾಘವೇಂದ್ರ ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು ಫೆ. 27 ರಂದು ಸುಮಾರು 12.30 ಕ್ಕೆ ಶಿವಮೊಗ್ಗಕ್ಕೆ ಲ್ಯಾಂಡ್ ಆಗಲಿದ್ದಾರೆ. ಇದು ನಮಗೆ ಬಹಳ ಸಂತಸದ ವಿಚಾರ ಎಂದ್ರು. ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸಿ ಹಲವು ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಒಂದೇ ವೇದಿಕೆಯಲ್ಲಿ ಪ್ರಧಾನಿ ಅವರು ರೈಲ್ವೇ, ವಿಮಾನ ನಿಲ್ದಾಣ, ಜಲಜೀವನ್, ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಕಾರ್ಯಕ್ರಮ & ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 2 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ನಂತರ ಮೋದಿ ಅವರು ಸುಮಾರು 4 ಗಂಟೆಗೆ ಶಿವಮೊಗ್ಗದಿಂದ ತೆರಳಲಿದ್ದಾರೆ ಎಂದು ಹೇಳಿದ್ರು.