Select Your Language

Notifications

webdunia
webdunia
webdunia
webdunia

ದಶಕದ ಸಂಭ್ರಮದಲ್ಲಿ ನಮ್ಮ ಮೆಟ್ರೋ

ದಶಕದ ಸಂಭ್ರಮದಲ್ಲಿ ನಮ್ಮ ಮೆಟ್ರೋ
ಬೆಂಗಳೂರು , ಬುಧವಾರ, 20 ಅಕ್ಟೋಬರ್ 2021 (16:42 IST)
ನಮ್ಮ ಮೆಟ್ರೋ’ ಕಳೆದೊಂದು ದಶಕದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸು ವಲ್ಲಿ ಯಶಸ್ವಿಯಾಗಿದ್ದು, ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಬೇಕಿದೆ. ಹೌದು, ಪ್ರತಿ ಕಿ.ಮೀ.ಗೆ “ನಮ್ಮ ಮೆಟ್ರೋ’ ಬಳಕೆದಾರರ ಸಂಖ್ಯೆ ಉಳಿದೆಲ್ಲ ಮೆಟ್ರೋಗಳಿಗಿಂತ ಹೆಚ್ಚಿದೆ.
ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ ದಲ್ಲಿದ್ದರೆ, ಇಡೀ ದೇಶದಲ್ಲಿ ಎರಡನೇ ಸ್ಥಾನ ದಲ್ಲಿದೆ.
 
ಇದು ಅಲ್ಪಾವಧಿಯಲ್ಲಿ “ನಮ್ಮ ಮೆಟ್ರೋ’ ಜನಪ್ರಿಯತೆಗೆ ಸಾಕ್ಷಿಯಾಗುವುದರ ಸಂಕೇತ. ಕೊರೊನಾಗೂ ಮುಂಚೆ ನಗರದಲ್ಲಿ ಮೆಟ್ರೋ ಜಾಲ 43 ಕಿ.ಮೀ. ಇತ್ತು. ಆಗ, ನಿತ್ಯ 4.15 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಇದನ್ನು ಪ್ರತಿ ಕಿ.ಮೀ.ಗೆ ಲೆಕ್ಕಹಾಕಿದರೆ, 9,651 ಬಳಕೆದಾರರಾಗುತ್ತಾರೆ.
 
ಇದು ದೇಶದ ಅತಿ ಉದ್ದದ ಜಾಲ (348 ಕಿ.ಮೀ.) ಹೊಂದಿರುವ ದೆಹಲಿ ಮೆಟ್ರೋಗಿಂತ ಹೆಚ್ಚು. ಅಲ್ಲಿ ದಿನಕ್ಕೆ 26 ಲಕ್ಷ ಜನ ಅಂದರೆ ಪ್ರತಿ ಕಿ.ಮೀ.ಗೆ 7,449 ಜನ ಪ್ರಯಾಣಿಸುತ್ತಿದ್ದರು. ಅತ್ಯಂತ ಹಳೆಯದಾದ ಕೊಲ್ಕತ್ತ ಮೆಟ್ರೋದಲ್ಲಿ ಇದರ ಪ್ರಮಾಣ 14 ಸಾವಿರ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲದ ಸುಳಿಯಲ್ಲಿ ಬಿಎಂಟಿಸಿ