Select Your Language

Notifications

webdunia
webdunia
webdunia
webdunia

ನಮ್ಮ ಮೆಟ್ರೋ ಕಾಮಗಾರಿಯ ಸ್ಥಳದಲ್ಲಿ 30 ಅಡಿ ಮಣ್ಣು ಕುಸಿದು ಕೆಲ ಕಾಲ ಆತಂಕ: ತಪ್ಪಿದ ಭಾರಿ ದುರಂತ

ನಮ್ಮ ಮೆಟ್ರೋ ಕಾಮಗಾರಿಯ ಸ್ಥಳದಲ್ಲಿ 30 ಅಡಿ ಮಣ್ಣು ಕುಸಿದು ಕೆಲ ಕಾಲ ಆತಂಕ:  ತಪ್ಪಿದ ಭಾರಿ ದುರಂತ
bangalore , ಗುರುವಾರ, 30 ಸೆಪ್ಟಂಬರ್ 2021 (22:12 IST)
ಬೆಂಗಳೂರು: ಮೆಟ್ರೋ ಕಾಮಗಾರಿಯಿಂದ 30 ಅಡಿ ಮಣ್ಣು ಕುಸಿದು ಭಾರಿ ಅನಾಹುತ ಸಂಭವಿಸುವುದರಲ್ಲಿ ಸ್ವಲ್ಪದರಲ್ಲೇ ತಪ್ಪಿದೆ. ನಗರದ ಟ್ಯಾನರಿ ರಸ್ತೆಯಲ್ಲಿ ಮುಚ್ಚಿದ್ದ ಬಾವಿಯ ಮಣ್ಣು ಕುಸಿದು ಅಪಾಯ ನಮ್ಮ ಮೆಟ್ರೋ ಸಂಸ್ಥೆ ಅಪಾಯ ತಂದಿಟ್ಟಿದೆ ಎಂದು ಜನತೆ ದೂರುತ್ತಿದ್ದಾರೆ. 
 
ಇತ್ತೀಚೆಗಷ್ಟೇ ಹೊರಬಂದ ಟನ್ನೆಲ್ ಬೋರಿಂಗ್ ಮಷೀನ್:   
 
ರಾಜಧಾನಿಯ ಗೊಟ್ಟಿಗೆರೆಯಿಂದ ನಾಗವಾರದವರೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಲ್ಲಿ ದುರಂತ ನೆಡೆದಿದೆ, ಇತ್ತೀಚೆಗಷ್ಟೆ ಸುರಂಗ ಕೊರೆದು ಟಿಬಿಎಂ (ಟನ್ನೆಲ್ ಬೋರಿಂಗ್ ಮಷೀನ್) ಹೊರಬಂದಿತ್ತು. ಟನಲ್ ಪ್ರೆಶರ್ ಗೆ ಮಣ್ಣು ಕುಸಿದು ಭಾರೀ ಸಮಸ್ಯೆ ಉಂಟಾಗಿದೆ, ಮುಂಜಾನೆ 3 ಗಂಟೆಯಲ್ಲಿ  ಮುಚ್ಚಿದ್ದ ಬಾವಿಯ ಮಣ್ಣು ಕುಸಿದು ಕೆಳಗೆ ಬಿದ್ದಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. 
 
ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳೇ ಕಾರಣ: 
 
ಮಾಲೀಕ ಝಬೀ ಎನ್ನುವವವರಿಗೆ ಸೇರಿದ ಜಾಗದಲ್ಲಿ ನೆಡೆದ ಅನಾಹುತಕ್ಕೆ ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳೇ ಇದಕ್ಕೆ ಕಾರಣ  ಮಾಲೀಕರು ಎನ್ನುತ್ತಿದ್ದಾರೆ. ಹೀಗಾಗಿ ನಮ್ಮ ಮೆಟ್ರೋ ಈ ಜಾಗ ಪಡೆದು ಇದಕ್ಕೆ ಪರಿಹಾರ ನೀಡಲಿ ಎಂದು ಮಾಲೀಕರು ಡಿಮ್ಯಾಂಡ್ ಮಾಡುತ್ತಿದ್ದಾರೆ.
metro

Share this Story:

Follow Webdunia kannada

ಮುಂದಿನ ಸುದ್ದಿ

ನಗರದ ಹಲವು ಕಡೆ ಸಂಚಾರ ನಡೆಸಲು ವಿದ್ಯುತ್ ಬಸ್ ಸಿದ್ಧ