Select Your Language

Notifications

webdunia
webdunia
webdunia
webdunia

ಮೂವರು ಶಂಕಿತರ ನಿಗೂಢ ಸಾವು

ಮೂವರು ಶಂಕಿತರ ನಿಗೂಢ ಸಾವು
ಜಮ್ಮು ಮತ್ತು ಕಾಶ್ಮೀರ , ಶನಿವಾರ, 23 ಡಿಸೆಂಬರ್ 2023 (20:08 IST)
ಸೇನಾ ವಾಹನಗಳ ಮೇಲೆ ದಾಳಿಗೆ ಸಂಬಂಧಿಸಿದಂತೆ ಮೂವರು ಶಂಕಿತರು ನಿಗೂಢವಾಗಿ ಸಾವಿಗೀಡಾಗಿದ್ದು, ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಇಂದು ಮುಂಜಾನೆಯಿಂದಲೇ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಎರಡು ಸೇನಾ ವಾಹನಗಳ ಮೇಲೆ ಉಗ್ರರು ನಡೆಸಿದ್ದ ಹಠಾತ್ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು.

ಇದರ ಬೆನ್ನಲ್ಲೇ ಮೂವರು ಶಂಕಿತರನ್ನು ವಿಚಾರಣೆಗಾಗಿ ಸೇನೆ ವಶಕ್ಕೆ ಪಡೆದಿತ್ತು. ಶುಕ್ರವಾರ ಈ ಮೂವರು ನಿಗೂಢವಾಗಿ ಮೃತಪಟ್ಟಿದ್ದು, ಚಿತ್ರಹಿಂಸೆ ನೀಡಲಾಗಿತ್ತು ಎನ್ನಲಾದ ವಿಡಿಯೊಗಳೂ ಹರಿದಾಡಿದ್ದವು. ವದಂತಿಗಳು ಹರಡುವುದನ್ನು ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಹದಗೆಡದಂತೆ ಕಾಪಾಡಲು ಮುನ್ನೆಚ್ಚರಿಕೆಯ ಕ್ರಮವಾಗಿ ಎರಡು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯತ್ನಾಳ್​​​ಗೆ BYV ಪರೋಕ್ಷ ಎಚ್ಚರಿಕೆ