Select Your Language

Notifications

webdunia
webdunia
webdunia
webdunia

ಮೇಕೆ ಮೇಯಿಸಲು ಹೋದ ಮಹಿಳೆಯನ್ನು ಕೊಂದು ಹಾಕಿದ ಹುಲಿ

ಮೇಕೆ ಮೇಯಿಸಲು ಹೋದ ಮಹಿಳೆಯನ್ನು ಕೊಂದು ಹಾಕಿದ ಹುಲಿ

sampriya

ಮೈಸೂರು , ಭಾನುವಾರ, 26 ಮೇ 2024 (12:51 IST)
Photo By X
ಮೈಸೂರು: ಹುಲಿ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ  ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನಲ್ಲಿ ಇಂದು ನಸುಕಿನ ಜಾವ ನಡೆದಿದೆ.

ಶನಿವಾರ ಮೇಕೆಗಳನ್ನು ಮೇಯಿಸಲು ಹೋದ ಮಹಿಳೆಯ ವಾಪಾಸ್ಸಾಗದ ಹಿನ್ನೆಲೆ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಇಂದು ಅವರ ರಕ್ತಸಿಕ್ತವಾದ ದೇಹ ಕಾಡಿನ ಮಧ್ಯೆ ಸಿಕ್ಕಿದೆ.

ಈ ಸಂಬಂಧ ಅಧಿಕಾರಿಗಳು ಪ್ರತಿಕ್ರಿಯಿಸಿ, ಹೆಚ್ ಡಿ ಕೋಟೆ ತಾಲೂಕಿನ ಮೂರ್ಬಂದ ಬೆಟ್ಟದಲ್ಲಿ ನಿನ್ನೆ ಶನಿವಾರ ರಾತ್ರಿ ಚಿಕ್ಕಿ ಎಂಬ ಮಹಿಳೆ ಹುಲಿ ದಾಳಿಗೆ ಬಲಿಯಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಎನ್ ಬೇಗೂರಿನ ಮಲದವಾಡಿ ಹಾಡಿಯವರು.

ಮೇಕೆಗಳನ್ನು ಸಾಕುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿ ದೇಹವನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿತ್ತು.
ಇಂದು ಬೆಳಗ್ಗೆ ಅರಣ್ಯ ಕಾವಲು ಗೋಪುರದ ಬಳಿ ಶವ ಪತ್ತೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ಲ್ಯಾಡಿಂಗ್‌ ವೇಳೆ ಬಾಗಿಲು ತೆಗೆಯಲು ಯತ್ನಿಸಿದ ವ್ಯಕ್ತಿ ಅರೆಸ್ಟ್‌