Select Your Language

Notifications

webdunia
webdunia
webdunia
webdunia

ಮೈಸೂರಿನ ಮೈಲಾರಿ ಹೋಟೆಲ್ ನಲ್ಲಿ ತಿಂಡಿ ಸವಿದ ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಮೈಸೂರು , ಶುಕ್ರವಾರ, 24 ಮೇ 2024 (16:35 IST)
ಮೈಸೂರು: ಸಿದ್ದರಾಮಯ್ಯ ಇಂದು ತಮ್ಮ ತವರು ಮೈಸೂರು ಪ್ರವಾಸದಲ್ಲಿದ್ದಾರೆ. ಈ ವೇಳೆ ತಮ್ಮ ಹಳೆಯ ಅಡ್ಡಾ ಮೈಸೂರಿನ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ತಿಂಡಿ ಸವಿದಿದ್ದಾರೆ.

ಈ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಸಿದ್ದರಾಮಯ್ಯನವರು ತಮ್ಮ ಕಾಲೇಜು ದಿನಗಳನ್ನು ನೆನೆದು ಭಾವುಕರಾದರು. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಅವರು ಭಾವುಕರಾಗಿ ಹಳೆಯ ದಿನಗಳ ಬಗ್ಗೆ ಬರೆದುಕೊಂಡಿದ್ದಾರೆ.

'ಇಂದು ಬೆಳಗ್ಗೆ ಮೈಸೂರಿನ ಮೈಲಾರಿ ಹೋಟೆಲ್ ನಲ್ಲಿ ತಿಂಡಿ ತಿನ್ನುವಾಗ ನನ್ನ ಕಾಲೇಜು ದಿನಗಳು ನೆನಪಾದವು. ನನ್ನ ಬದುಕಿನ ಅವಿಸ್ಮರಣೀಯ ನೆನಪುಗಳೆಲ್ಲವೂ ಮೈಸೂರಿನ ಜೊತೆ ಬೆಸೆದುಕೊಂಡಿವೆ. ಮೈಸೂರು ನನಗೆ ಹುಟ್ಟೂರು ಮಾತ್ರವಲ್ಲ ಬದುಕು ಕೊಟ್ಟ ಊರು. ದೈಹಿಕವಾಗಿ ದೂರವಿದ್ದಾಗಲೂ ಮೈಸೂರಿನ ನೆನಪು ಮನಸ್ಸಿಗೆ ಸದಾ ಹತ್ತಿರವಾಗಿರುತ್ತದೆ. ಈ ಮಣ್ಣಿನ ಋಣ ಬಹಳ ದೊಡ್ಡದು, ಅದರೆದುರು ನಾವು ಸಣ್ಣವರು' ಎಂದು ಹಳೆಯ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.
 
ಮೂಲತಃ ಮೈಸೂರಿನವರಾದ ಸಿದ್ದರಾಮಯ್ಯ ಆಗಾಗ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಮೈಸೂರಿನಲ್ಲಿ ಅವರ ಕೆಲವು ಆಪ್ತ ಸ್ಥಳಗಳಲ್ಲಿ ಇದೂ ಒಂದು ಎನ್ನಬಹುದು.

 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನನ್ನನ್ನು ಹೊರಗಿನವಳು ಎಂದಾಗ, ಬಿಜೆಪಿ ನನಗೆ ಟಿಕೆಟ್‌ ನೀಡಿತು: ಕಂಗನಾ ರಣಾವತ್‌