ಕೆಲವರು ನನ್ನ ಟಿಕೆಟ್ ತಪ್ಪಿಸಿದ್ದಾರೆ: ರಾಮದಾಸ್ ಅಸಮಾಧಾನ

Webdunia
ಸೋಮವಾರ, 9 ಆಗಸ್ಟ್ 2021 (21:51 IST)

ಮೈಸೂರು: ರಾಜ್ಯದಲ್ಲಿ ಮಂತ್ರಿ ಮಾಡಿದ್ದರೆ ರಾಜ್ಯ ಸುತ್ತುತ್ತಿದ್ದೆ. ನನಗೆ ಕೇವಲ ಕೆ.ಆರ್ ಕ್ಷೇತ್ರಕ್ಕೆ ಸೀಮಿತ ಮಾಡಿದ್ದಾರೆ. ಅದಕ್ಕೆ ಮಾತ್ರ ಸೀಮಿತಗೊಂಡು ಕೆಲಸ ಮಾಡುತ್ತೇನೆ ಎಂದು ಮೈಸೂರು ಬಿಜೆಪಿ ಶಾಸಕ ಎಸ್.ಎ. ರಾಮದಾ

ಸ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲ್ ಅವರೇ ನನಗೆ ಕರೆ ಮಾಡಿ ನಿಮಗೆ ಸಚಿವ ಸ್ಥಾನ ಕೊಡಬೇಕೆಂದು ಸಂಘ ಪಕ್ಷ ಸೂಚಿಸಿದೆ ಎಂದು ಹೇಳಿದ್ದರು. ಅಲ್ಲದೇ ಸಚಿವರ ಪಟ್ಟಿಯಲ್ಲೂ ಮೊದಲ ಸ್ಥಾನದಲ್ಲಿದೆ ನಿಮ್ಮ ಹೆಸರು ಎಂದಿದ್ದರು. ಆದರೆ ಅದಾದ ಎರಡು ಗಂಟೆ ಬಳಿಕ ಯಾರೋ ಕರೆ ಮಾಡಿ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದು ಅವರು ಹೇಳಿದರು.

ಟಿಕೆಟ್ ತಪ್ಪಿಸಿದ ವ್ಯಕ್ತಿಗೆ ನಾನು ಕರೆ ಮಾಡಿ ಧನ್ಯವಾದ ಹೇಳಿದೆ. ಈ ರೀತಿ ಮಾಡಿದ್ದೀರಾ ಎಂದು ಧನ್ಯವಾದ ಹೇಳಿದೆ‌. ನಾನು ಹಾಗೆ ಮಾಡಿಲ್ಲ ನಿಮಗೆ ಯಾರು ಹೇಳಿದ್ದು ಎಂದು ಆ ವ್ಯಕ್ತಿ ಕೇಳಿದರು. ನನಗೆ ಮೈಸೂರಿನಿಂದ ದೆಹಲಿವರೆಗೂ ಪರಿಚಯಸ್ಥರು ಇದ್ದಾರೆ ಎಂದು ಆ ವ್ಯಕ್ತಿಗೆ ಹೇಳಿದೆ. ಆದರೆ ಈ ರೀತಿ ಮಾಡುವುದು ಪಕ್ಷದಲ್ಲಿದ್ದುಕೊಂಡು ಸರಿಯಲ್ಲ. ಪಟ್ಟಿ ಅಂತಿಮವಾದ ಬಳಿಕ ನನ್ನ ಹೆಸರು ಕೈ ಬಿಡಿಸಿದರು ಎಂದು ಅವರು ಹೇಳಿದರು.

ಕಾಣದ ಕೈ ಮಾಡಿದ ಒಂದು ಕರೆಯಿಂದ ನನಗೆ ಸಚಿವ ಸ್ಥಾನ ತಪ್ಪಿತು. ಇದು ಬೆನ್ನಿಗೆ ಹಾಕಿದ ಚೂರಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಈ ಬಗ್ಗೆ ನಾನು ಏನು ಮಾತಾಡಲ್ಲ. ನಾನು ನನ್ನ ಕ್ಷೇತ್ರವನ್ನೇ ದೇಶ ರಾಜ್ಯ ಎಂದು ಭಾವಿಸಿ ಕೆಲಸ‌ ಮಾಡುತ್ತೇನೆ. ನನ್ನ ಪಕ್ಷವೇ ಕೆ.ಆರ್ ಕ್ಷೇತ್ರಕ್ಕೆ ಸೀಮಿತಗೊಳಿಸಿದ ಕಾರಣ ನಾನು ಇಲ್ಲಿಯೇ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ರಾಮದಾಸ್ ವಿವರಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ವಿದೇಶ ಪ್ರವಾಸದಿಂದ ಏನು ಲಾಭ: ಪ್ರಿಯಾಂಕ್ ಖರ್ಗೆ ಕಿಡಿ

ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ನೆದರ್ಲ್ಯಾಂಡ್ಸ್ ನಿಂದ ಬಂತು ವಿಶೇಷ ಉಡುಗೊರೆ ಏನದು Video ನೋಡಿ

ಮೋದಿಗೆ ಅಂತಾರಾಷ್ಟ್ರೀಯ ಸಂಬಂಧ ನಿಭಾಯಿಸಲು ಬರಲ್ಲ: ಡಿಕೆ ಶಿವಕುಮಾರ್

ವಿಧಿಯಾಟಕ್ಕೆ ಬಲಿಯಾದ ಕುಟುಂಬ: ಚಾವಣಿ ಕುಸಿದು, ತಂದೆ, ತಾಯಿ, ಇಬ್ಬರು ಮಕ್ಕಳು ದಾರುಣ ಸಾವು

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments