Webdunia - Bharat's app for daily news and videos

Install App

ಕೊರೊನಾ ಗೆದ್ದ ಖ್ಯಾತ ನಟಿ 35ನೇ ವಯಸ್ಸಿಗೆ ಬ್ರೈನ್ ಟ್ಯೂಮರ್ ಗೆ ಬಲಿ

Webdunia
ಸೋಮವಾರ, 9 ಆಗಸ್ಟ್ 2021 (21:37 IST)
ಕಳೆದ ಕೆಲ ವರ್ಷಗಳಿಂದ ಬ್ರೈನ್​ ಟ್ಯೂಮರ್​ನಿಂದ ಬಳಲುತ್ತಿದ್ದ ನಟಿ ಶರಣ್ಯ ಶಶಿ ಅನೇಕ ಸಲ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.
 2012ರಲ್ಲಿ ಬ್ರೈನ್​ ಟ್ಯೂಮರ್​ಗೆ ಒಳಗಾಗಿದ್ದ ನಟಿಗೆ ಇಲ್ಲಿಯವರೆಗೆ ಒಟ್ಟು 11 ಶಸ್ತ್ರಚಿಕಿತ್ಸೆಗಳಾಗಿದ್ದವು. ಕೋವಿಡ್ ಸೋಂಕಿಗೊಳಗಾದ ಬಳಿಕ ಚೇತರಿಸಿಕೊಂಡಿದ್ದ ಅವರಿಗೆ ಮತ್ತೆ ಅನಾರೋಗ್ಯದ ತೊಂದರೆ ಆರಂಭಗೊಂಡಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮಲಯಾಳಂನ ಚಕ್ಕೋರಂದಮನ್ ಮತ್ತು ಚೋಟಾ ಮುಂಬೈ ಚಿತ್ರಗಳಲ್ಲಿ ನಟನೆ ಮಾಡಿದ್ದಳು. ಇದರ ಜೊತೆಗೆ ಅನೇಕ ಟಿವಿ ಧಾರಾವಾಹಿಗಳಲ್ಲಿ ಇವರು ನಟನೆ ಮಾಡಿ, ಜನಪ್ರಿಯರಾಗಿದ್ದರು.
ನಟಿ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​​​, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಹಾಗೂ ಸಾವಿನ ನೋವು ತಡೆದುಕೊಳ್ಳುವ ಶಕ್ತಿಯನ್ನ ದೇವರು ಅವರ ಕುಟುಂಬಕ್ಕೆ ನೀಡಲಿ. ಟ್ಯೂಮರ್​ನಿಂದ ಬಳಲುತ್ತಿದ್ದ ನಟಿ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದರು ಎಂದು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.
ಶರಣ್ಯ ಮಲಯಾಳಂನ ಕಿರುತೆರೆಯಲ್ಲಿ ಅಪಾರ ಪ್ರಮಾಣದ ಅಭಿಮಾನ ಬಳಗ ಹೊಂದಿದ್ದಾಳೆ. ಮಂತರಕೋಡಿ, ಸೀತಾ ಹಾಗೂ ಹರಿಚಂದ್ರನಮ್​ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದು, ಕೆಲವೊಂದು ಸಿನಿಮಾಗಳಲ್ಲಿ ಸಹಾಯಕ ಪಾತ್ರ ಸಹ ನಿರ್ವಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರೀ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ರಾಷ್ಟ್ರಪತಿಯನ್ನು ಭೇಟಿಯಾದ ಪ್ರಧಾನಿ ಮೋದಿ

ಉತ್ತರಪ್ರದೇಶ: ಪೃಥ್ವಿನಾಥ ದೇವಸ್ಥಾನಕ್ಕೆ ಹೊರಟು ಮಸಣ ಸೇರಿದ 11 ಮಂದಿ

ಮೀರತ್‌ ಭಯಾನಕ ಅಪರಾಧ: 7 ತಿಂಗಳ ಗರ್ಭಿಣಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ

₹2 ವೈದ್ಯ ಎಂದೇ ಖ್ಯಾತಿ ಪಡೆದಿದ್ದ ಕೇರಳದ ಡಾ. ಎಕೆ ರೈರು ಗೋಪಾಲ್ ಇನ್ನಿಲ್ಲ

ತನ್ನ ಸ್ಥಿತಿ ನೆನೆದು ಜೈಲಿನಲ್ಲಿ ಖೈದಿ ಪ್ರಜ್ವಲ್ ರೇವಣ್ಣ ಕಣ್ಣೀರು, ಕೈದಿ ನಂಬರ್‌ ನೀಡಿದ್ಮೇಲೆ ಫುಲ್ ಸೈಲೆಂಟ್‌

ಮುಂದಿನ ಸುದ್ದಿ
Show comments