ಮೈಸೂರು: ದಸರಾದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ ಆನೆಗಳ ತೂಕವನ್ನು ಇಂದು ಪರಿಶೀಲಿಸಿದ್ದು, ಅಂಬಾರಿ ಹೊರುವ ಅಭಿಮನ್ಯುಗಿಂತ ಭೀಮನೇ ಬಲಶಾಲಿಯಾಗಿದ್ದಾನೆ.
ಭೀಮ 5, 465 ಕೆಜಿ ತೂಕವಿದ್ದು, ಅಂಬಾರಿ ಹೊರುವ 5,360 ಕೆ.ಜಿ ತೂಕವಿದ್ದಾನೆ.
ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ 9 ದಸರಾ ಆನೆಗಳ ತೂಕ ಪರೀಕ್ಷೆಯು ನಗರದ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಎಲೆಕ್ಟ್ರಾನಿಕ್ ವ್ಹೇಬ್ರಿಡ್ಜ್ನಲ್ಲಿ ಸೋಮವಾರ ನಡೆಯಿತು.
ಕಳೆದ ದಸರೆಯಲ್ಲಿ ನಡೆದಿದ್ದ ತೂಕ ಪರೀಕ್ಷೆಯಲ್ಲಿ 5.3 ಟನ್ ತೂಗಿ, ಎಲ್ಲ ಆನೆಗಳಿಗಿಂತ ಅಭಿಮನ್ಯು ತೂಕಬಲದಲ್ಲಿ ಮೊದಲ ಸ್ಥಾನದಲ್ಲಿದ್ದನು. ಈ ಬಾರಿಯ ಮೊದಲ ತೂಕ ಪರೀಕ್ಷೆಯಲ್ಲಿ 60 ಕೆ.ಜಿ ಹೆಚ್ಚು ತೂಗಿದ್ದಾನೆ.
ಕಳೆದ 9 ವರ್ಷದಿಂದ ದಸರೆಗೆ ಬರುತ್ತಿರುವ ಅನುಭವಿ ಆನೆ ಧನಂಜಯ 5,310 ಕೆ.ಜಿ ತೂಗಿ ಮೂರನೇ ಸ್ಥಾನ ಪಡೆದರೆ, ಎತ್ತರದ ಆನೆಯಾದ (2.86 ಮೀ.), ಆಕರ್ಷಕ ಕಿವಿಗಳನ್ನು ಹೊಂದಿರುವ 40 ವರ್ಷದ ಏಕಲವ್ಯ 5,305 ಕೆ.ಜಿ ತೂಗಿ 4ನೇ ಸ್ಥಾನ ಪಡೆದನು.
ಡಿಸಿಎಫ್ ಐ.ಬಿ.ಪ್ರಭುಗೌಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.