Select Your Language

Notifications

webdunia
webdunia
webdunia
webdunia

ಅಂಬಾರಿ ಹೊರಲಿರುವ ಅಭಿಮನ್ಯುವಿನ ತೂಕವೆಷ್ಟು ಗೊತ್ತಾ, ಇತರ ಆನೆಗಳಿಗಿಂತ ಈತನೇ ಸ್ಟ್ರಾಂಗು ಗುರು

Mysore Dasara

Sampriya

ಮೈಸೂರು , ಭಾನುವಾರ, 25 ಆಗಸ್ಟ್ 2024 (13:11 IST)
Photo Courtesy X
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಅಂಬಾರಿಯಲ್ಲಿ ಭಾಗವಹಿಸಲು ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಿರುವ 9 ಆನೆಗಳಿಗೆ ತೂಕ ಹಾಕುವ ಪ್ರಕ್ರಿಯೆ ನಡೆಯಿತು. ಕ್ಯಾಪ್ಟನ್‌ ಅಭಿಮನ್ಯು ಅತಿ ಹೆಚ್ಚು ತೂಕ ಹೊಂದಿದ್ದಾನೆ.

ಹಿಂದಿನ ದಸರಾ ಸಂದರ್ಭದಲ್ಲಿ ಅರ್ಜುನ ಅತಿಹೆಚ್ಚು ಭಾರ ತೂಗುತ್ತಿದ್ದ. ಆದರೆ, ಆತ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದಾನೆ. ಈ ಬಾರಿ ಕ್ಯಾಪ್ಟನ್‌ ಅಭಿಮನ್ಯು ಅತಿ ಹೆಚ್ಚು ಭಾರ ತೂಗಿದೆ.
ಬರೋಬ್ಬರಿ 5,560 ಕೆಜಿ ತೂಕವನ್ನು ಅಭಿಮನ್ಯು ಹೊಂದಿದ್ದು, ಎರಡನೇ ಸ್ಥಾನದಲ್ಲಿ ಧನಂಜಯ ಆನೆ ಇದೆ.

ಧನಂಜಯ 5,155 ಕೆ.ಜಿ., ಗೋಪಿ 4,970 ಕೆ.ಜಿ., ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗಿರುವ ಏಕಲವ್ಯ 4,730 ಕೆ.ಜಿ., ಭೀಮ 4,945 ಕೆ.ಜಿ., ಹೆಣ್ಣಾನೆಗಳಾದ ವರಲಕ್ಷ್ಮೀ 3,495 ಕೆ.ಜಿ., ಲಕ್ಷ್ಮೇ 2,480 ಕೆ.ಜಿ. ತೂಕ ಇವೆ.

ಕಾಡಿನಿಂದ ನಾಡಿಗೆ ಬರುವ ಗಜಪಡೆಯನ್ನು ತಾಲೀಮಿಗೂ ಮುನ್ನ ತೂಕ ಪರೀಕ್ಷೆ ಮಾಡಲಾಗುತ್ತದೆ. ಜಂಬೂ ಸವಾರಿ ಮೆರವಣಿಗೆ ಹಿಂದಿನ ದಿನ ಮತ್ತೊಮ್ಮೆ ತೂಕ ಪರೀಕ್ಷೆ ಮಾಡಲಾಗುತ್ತದೆ. ಮೊದಲ ಹಂತದ 9 ಗಜಪಡೆಗಳು ಆರೋಗ್ಯವಾಗಿವೆ ಎಂದು ಡಿಸಿಎಫ್‌ ಪ್ರಭುಗೌಡ ಮಾತನಾಡಿದರು.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದ ಮೊದಲ ಹಂತದ ಅಭಿಮನ್ಯು ನೇತೃತ್ವದ 9 ಆನೆಗಳನ್ನು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಮನೆ ಒಳಗೆ ಸ್ವಾಗತಿಸಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಲೆಬನಾನ್ ಮೇಲೆ ದಾಳಿ ಬೆನ್ನಲ್ಲೇ ಇಸ್ರೇಲ್‌ನತ್ತ ರಾಕೆಟ್‌ ಉಡಾಯಿಸಿದ ಹಿಜ್ಬುಲ್ಲಾ: ತುರ್ತು ಪರಿಸ್ಥಿತಿ ಘೋಷಣೆ