Publish Date: Fri, 26 Dec 2025 (16:29 IST)
Updated Date: Fri, 26 Dec 2025 (16:34 IST)
ಮೈಸೂರು: ಅರಮನೆ ಎದುರು ಹೀಲಿಯಂ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ ಈಗ 2 ಕ್ಕೆ ಏರಿಕೆಯಾಗಿದೆ.
ಮೈಸೂರು ಅರಮನೆ ಬಳಿ ಬಲೂನ್ ಮಾರಾಟ ಮಾಡುತ್ತಿದ್ದ ಸಲೀಂ ಎಂಬಾತನ ಬಳಿಯಿದ್ದ ಹೀಲಿಯಂ ಸಿಲಿಂಡರ್ ಸ್ಪೋಟಗೊಂಡು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಈ ಪೈಕಿ ಈಗ ಮಂಜುಳಾ ಎನ್ನುವ ಮಹಿಳೆ ಕೂಡಾ ಇದ್ದರು. ಆಕೆ ಈಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ಖಚಿತವಾಗಿದೆ. ಘಟನೆ ಬಳಿಕ ಗಾಯಗೊಂಡಿದ್ದ ಅವರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಂಜುಳಾ ಸ್ಪೋಟದ ವೇಳೆ ಅಲ್ಲೇ ಪಕ್ಕದಲ್ಲಿದ್ದರು ಎನ್ನಲಾಗಿದೆ. ಮೂಲತಃ ನಂಜನಗೂಡಿನವರಾಗಿದ್ದ ಅವರು ಮೈಸೂರಿಗೆ ಬಂದಿದ್ದರು. ಮನೆಗೆ ವಾಪಸ್ ಮರಳುವ ವೇಳೆ ಸ್ಪೋಟವಾಗಿತ್ತು. ಇನ್ನೂ ಮೂವರು ಗಾಯಗೊಂಡಿದ್ದರು. ಅವರಿಗೆ ಚಿಕಿತ್ಸೆ ಮುಂದುವರಿದಿದೆ.