Select Your Language

Notifications

webdunia
webdunia
webdunia
webdunia

ಬೆಂಗಳೂರು ಏರ್‌ಪೋರ್ಟ್‌ ಪಿಕ್‌ ಅಪ್‌ ನಿಯಮಕ್ಕೆ ಮಿಶ್ರಪ್ರತಿಕ್ರಿಯೆ, ಭಾರೀ ಬದಲಾವಣೆ

Bengaluru Airport Terminal 1
Photo Credit X
ಬೆಂಗಳೂರು: ಈಚೆಗೆ ಸುದ್ದಿಗೆ ಕಾರಣವಾಗಿದ್ದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರ ಆಗಮನ ದ್ವಾರದ ಪಿಕಪ್ ಪ್ರದೇಶದ ಪಾರ್ಕಿಂಗ್ ವಿಚಾರದ ಬಗ್ಗೆ ಇದೀಗ ಬಿಗ್‌ಅಪ್ಡೇಟ್ ಸಿಕ್ಕಿದೆ. ಇದೀಗ ಉಚಿತ ಪಾರ್ಕಿಂಗ್ ಸಮಯವನ್ನು ಹೆಚ್ಚಿಸಲಾಗಿದೆ.

ಈ ಬದಲಾವಣೆಯು ಇಂದಿನಿಂದಲೇ ಜಾರಿಗೆ ಬರುತ್ತಿದ್ದು, ಇದುವರೆಗಿದ್ದ 10 ನಿಮಿಷ ಇದ್ದ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು 15 ನಿಮಿಷಕ್ಕೆ ಹೆಚ್ಚಳ ಮಾಡಲಾಗಿದೆ. 

ವಾಣಿಜ್ಯ ವಾಹನಗಳು ಮತ್ತು ಟ್ಯಾಕ್ಸಿ ಸೇವೆಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ವಿಮಾನ ನಿಲ್ದಾಣದ ನಿರ್ವಹಣೆ ಮಾಡುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು(ಬಿಐಎಎಲ್) ಹೇಳಿದೆ.

ಈಚೆಗೆ 10 ನಿಮಿಷ ಉಚಿತ ಪಾರ್ಕಿಂಗ್ ವಿಚಾರ ಸಂಬಂಧ ಪ್ರಯಾಣಿಕರು ಮತ್ತು ಈ ಸೌಲಭ್ಯ ಬಳಸುವ ಇತರರ ಪ್ರತಿಕ್ರಿಯೆ ಆಧರಿಸಿ ಈ ಪರಿಷ್ಕರಣೆ ಮಾಡಲಾಗಿದೆ. ಪ್ರಯಾಣಿಕರು ಮತ್ತು ಅವರ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಬಿಐಎಎಲ್ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುರ್ಚಿ ಬಗ್ಗೆ ಕೇಳಿದ್ದಕ್ಕೆ ಗರಂ ಆದ ಸಿದ್ದರಾಮಯ್ಯ