ಬೆಂಗಳೂರು: ಕನ್ನಡ ಸಿನಿಮಾ ಮೂಲಕ ಗುರುತಿಸಿಕೊಂಡಿವ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡವನ್ನು ಕಡೆಗಣಿಸಿದ್ದಾರೆಂದು ನ್ಯಾಶನಲ್ ಕ್ರಶ್ ಮೇಲೆ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಾಣಿಗ ಆಕ್ರೋಶ ಹೊರಹಾಕಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕರಿಯರ್ ಆರಂಭಿಸಿದ ರಶ್ಮಿಕಾ ಮಂದಣ್ಣ ಅವರು ಕಳೆದ ವರ್ಷ ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಹ್ವಾನ ನೀಡಿದಾಗ ನಿರಾಕರಿಸಿದ್ದರು. ನನ್ನ ಮನೆ ಹೈದರಾಬಾದ್‌ನಲ್ಲಿದೆ, ಕರ್ನಾಟಕ ಎಲ್ಲಿದೆ ಎಂದು ನನಗೆ ಗೊತ್ತಿಲ್ಲ, ನನಗೆ ಸಮಯವಿಲ್ಲ, ನನಗೆ ಬರಲು ಸಾಧ್ಯವಿಲ್ಲ ಎಂದಿದ್ದರು. ಆದರೂ ನಮ್ಮ ಶಾಸಕರೊಬ್ಬರು ಅವರ ಮನೆಗೆ ಭೇಟಿ ನೀಡಿ ಆಹ್ವಾನ ನೀಡಿದ್ದರು. ಕನ್ನಡವನ್ನು ಕಡೆಗಣಿಸಿರುವ ಅವರಿಗೆ ಸರಿಯಾದ ಪಾಠ ಕಲಿಸಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.
ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಾನು ಹೈದರಾಬಾದ್‌ನಿಂದ ಬಂದವಳು ಎನ್ನುವ ಮೂಲಕ ರಶ್ಮಿಕಾ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದರು.
ಕೆಲವು ಕನ್ನಡ ಪರ ಅವರು ರಶ್ಮಿಕಾ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿ, ಕನ್ನಡ ಮೂಲಕ ಸಿನಿಮಾ ಜರ್ನಿಯನ್ನು ಆರಂಭಿಸಿದ ರಶ್ಮಿಕಾ ಇದೀಗ ಕನ್ನಡಕ್ಕೆ ಅಗೌರವ ಕೊಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು.