ಪ್ರಯಾಗರಾಜ್ (ಉತ್ತರ ಪ್ರದೇಶ): ಮಹಾಕುಂಭ 2025 ಅಭೂತಪೂರ್ವವಾಗಿ ಸಂಪನ್ನಗೊಂಡಿತು. ಪವಿತ್ರ ತ್ರಿವೇಣಿ ಸಂಗಮದಲ್ಲಿ ಸುಮಾರು 66 ಕೋಟಿಗೂ ಅಧಿಕ ಭಕ್ತರು ಪುಣ್ಯ ಸ್ನಾನ ಮಾಡಿದರು.
ಪ್ರಯಾಗ್‌ರಾಜ್‌ನ ಸಂಗಮ ದಡದಲ್ಲಿ ನಡೆದ ಈ ಮಹಾಕುಂಭ ಮೇಳವು 144 ವರ್ಷಗಳ ನಂತರ ಭಾರತ ಮತ್ತು ಪ್ರಪಂಚದಾದ್ಯಂತ ಅಪಾರ ಜನಸಮೂಹವನ್ನು ಸೇರಿಸಿತು.
ಇನ್ನೂ ಅಪಾರ ಜನಸಮೂಹದಲ್ಲಿ ಹಲವರು ತಮ್ಮ ಆತ್ಮೀಯರಿಂದ ಬೇರ್ಪಟ್ಟಿದ್ದರು. ಕುಂಭಮೇಳ ಮುಗಿದ ಕೆಲವೇ ದಿನಗಳಲ್ಲೇ ತಮ್ಮವರಿಂದ ಬೇರ್ಪಟ್ಟಿದ್ದ 54,357 ಜನರನ್ನು ಅವರ ಕುಟುಂಬದವರೊಂದಿಗೆ ಯೋಗಿ ಸರ್ಕಾರ ಸೇರಿಸಿದೆ.
ಭಾರತ ಮತ್ತು ನೇಪಾಳದ ವಿವಿಧ ರಾಜ್ಯಗಳ ಭಕ್ತರನ್ನು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ.
ಡಿಜಿಟಲ್ ಖೋಯಾ ಪಾಯ ಕೇಂದ್ರದ ಸ್ಥಾಪನೆಯಿಂದಾಗಿ ತಮ್ಮ ಮನೆಯವರಿಂದ ಬೇರ್ಪಟ್ಟಿದ್ದ 35,000 ಕ್ಕೂ ಹೆಚ್ಚು ಮಂದಿ ತ್ವರಿತವಾಗಿ ತಮ್ಮ ಮನೆಯವರನ್ನು ಸೇರಿಕೊಂಡರು.
ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವ ವೇಳೆ ತಮ್ಮವರಿಂದ 24,896 ವ್ಯಕ್ತಿಗಳು ಬೇರ್ಪಟ್ಟಿದ್ದರು. ಇನ್ನೂ ಮಹಾಕುಂಭದ ಅಂತ್ಯದ ವೇಳೆಗೆ ಒಟ್ಟು 35,083ಕ್ಕೆ ತಂದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಕ್ರಮದ ಮೇರೆಗೆ, ಮಹಾಕುಂಭ ಪ್ರದೇಶದಾದ್ಯಂತ 10 ಡಿಜಿಟಲ್ ಖೋಯಾ ಪಾಯ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಈ ಕೇಂದ್ರಗಳು ಅತ್ಯಾಧುನಿಕ AI-ಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆಗಳು, ಯಂತ್ರ ಕಲಿಕೆ ಮತ್ತು ಬಹುಭಾಷಾ ಬೆಂಬಲವನ್ನು ಒಳಗೊಂಡಿವೆ.