Select Your Language

Notifications

webdunia
webdunia
webdunia
webdunia

ಹೆಣ್ಣು ಮಕ್ಕಳ ಮುಂದೆ ನೀರು ಎರಚಿದ ಅಂತ ಅಣ್ಣನನ್ನೇ ಕೊಂದ ತಮ್ಮ!

webdunia
bangalore , ಗುರುವಾರ, 16 ಜೂನ್ 2022 (20:56 IST)
ಮನೆ ಹೆಣ್ಣುಮಕ್ಕಳು ಬಟ್ಟೆ ತೊಳೆಯುವಾಗ ನೀರು ಎರಚಿದ ವಿಚಾರಕ್ಕೆ ಅಣ್ಣನನ್ನೇ ತಮ್ಮ ಕೊಲೆ ಮಾಡಿದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ಕೋಟೆ (50) ಕೊಲೆಯಾಗಿರುವ ವ್ಯಕ್ತಿ. ಆರೋಪಿ ಶರಣಪ್ಪ ಸಂಬಂಧದಲ್ಲಿ ಸಹೋದರನಾಗಬೇಕು. ಮನೆ ಹೆಣ್ಣುಮಕ್ಕಳು ಬಟ್ಟೆ ತೊಳೆಯುವಾಗ ನೀರು ಎರಚಿದ ವಿಚಾರಕ್ಕೆ ಜಗಳ ಶುರುವಾಗಿ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. 
ಈ ಇಬ್ಬರು ರಾಜಿ ಸಂಧಾನವಾದ ಮೇಲು ಕ್ಯಾತೆ ತೆಗೆದು ಜಗಳ ಮಾಡಿಕೊಂಡಿದ್ದರು. ನಿನ್ನೆ ಸಂಜೆ ಪುನಃ ಸಂಧಾನಕ್ಕೆ ಕರೆದು ಆರೋಪಿ ಶರಣಪ್ಪ ಹಾಗೂ ಆತನ ಕಡೆಯವರು ಅಟ್ಟಾಡಿಸಿಕೊಂಡು ಹೊಡೆದು ಕೊಲೆ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. 
ಗ್ರಾಮದಲ್ಲಿ ಮರ್ಯಾದಸ್ಥ ಕುಟುಂಬಗಳು ಎನ್ನುವ ಹೆಸರಿದ್ದರೂ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಕೊಲೆ ಹಂತಕ್ಕೆ ಹೋಗಿದ್ದಾರೆ. ಘಟನೆ ಹಿನ್ನೆಲೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಂಗಲ್ಯ ಸರ ಕೀಳು ಬಿಡದ ಮಹಿಳೆಯನ್ನು ಕೆರೆಗೆ ತಳ್ಳಿ ಕೊಂದ ಸರಗಳ್ಳ!