Select Your Language

Notifications

webdunia
webdunia
webdunia
webdunia

ಎಂ.ಪಿ ರೇಣುಕಾಚಾರ್ಯ ಸಹೋದರ ಸೇರಿ 11 ಮಂದಿ ವಿರುದ್ಧ FIR ದಾಖಲು

ಎಂ.ಪಿ ರೇಣುಕಾಚಾರ್ಯ ಸಹೋದರ ಸೇರಿ 11 ಮಂದಿ ವಿರುದ್ಧ FIR ದಾಖಲು
bangalore , ಭಾನುವಾರ, 3 ಏಪ್ರಿಲ್ 2022 (19:46 IST)
ಬೇಡ ಜಂಗಮ ಎಂದು ನಕಲಿ ಎಸ್ಸಿ ಜಾತಿ ಪ್ರಮಾಣ ಪತ್ರ (Caste Certificate) ಪಡೆದಿದ್ದಾರೆ ಎಂದು ಆರೋಪಿಸಿ ದ್ವಾರಕೇಶ್ವರಯ್ಯ ಅವರನ್ನು ದಲಿತ ಮುಖಂಡರು ಈ ಮೊದಲು ಮುತ್ತಿಗೆ ಹಾಕಿದ್ದರು. ಈ ಹಿನ್ನೆಲೆ ಮತ್ತೆ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರ ಎಂ.ಪಿ. ದ್ವಾರಕೇಶ್ವರಯ್ಯ ಹೋರಾಟಕ್ಕೆ ಮುಂದಾಗಿದ್ದಾರೆ. ಹೂವಿನಮಡು ಅಂಜನಪ್ಪ, ಹೆಗ್ಗೆರೆ ರಂಗಪ್ಪ ಸೇರಿ 13 ಜನ ದಲಿತ ಮುಖಂಡರ ವಿರುದ್ಧ ದ್ವಾರಕೇಶ್ವರಯ್ಯ ಎಫ್.ಐ.ಆರ್ ದಾಖಲಿಸಿದ್ದರು.
 
ಮಾರ್ಚ್ 28 ರಂದು ದಾವಣಗೆರೆ ಪ್ರೆಸ್ ಕ್ಲಬ್ ಎದುರು ನಡೆದ ಘಟನೆ ಹಿನ್ನೆಲೆ ಎಫ್ ಐ ಆರ್ ದಾಖಲು ಮಾಡಲಾಗಿತ್ತು.  ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದ್ವಾರಕೇಶ್ವರಯ್ಯ ದೂರು ದಾಖಲಿಸಿದ್ದರು. ರೇಣುಕಾಚಾರ್ಯ ವಿರುದ್ಧ ಹೋರಾಟಕ್ಕೆ ಸಜ್ಜಾದ ದಲಿತ ಸಂಘಟನೆಗಳು ರೇಣುಕಾಚಾರ್ಯ ಕುಟುಂಬ ಈಗಾಗಲೇ ಹಿಂದು ಲಿಂಗಾಯತ ಇದ್ದವರು ಬೇಡಜಂಗಮ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ವಿಚಾರ ಪ್ರಶ್ನೆ ಮಾಡಿದಕ್ಕೆ ರೇಣುಕಾಚಾರ್ಯ ಸಹೋದರನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ರೇಣುಕಾಚಾರ್ಯ ಅವರನ್ನ ತಕ್ಷಣ ಗಡಿಪಾರು ಮಾಡಬೇಕು. ವಿಳಂಬವಾದ್ರೆ ದಲಿತ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ಆರಂಭಿಸುವುದಾಗಿ ದಲಿತರ ಸಂಘಟನೆಗಳ ಒಕ್ಕೂಟದಿಂದ ಎಚ್ಚರಿಕೆ ನೀಡಿದ್ದರು.
 
ಶಾಸಕ ರೇಣುಕಾಚಾರ್ಯ ವಿರುದ್ಧ ದಲಿತ ಸಂಘಟನೆಗಳು ವಿಭಿನ್ನ ಹೋರಾಟ ನಡೆಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿ ಶಾಸಕ ರೇಣುಕಾಚಾರ್ಯ ವಿರುದ್ದ ಹೋರಾಟ ಮಾಡಿದ್ದರು. ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಲಾಗಿತ್ತು. ಲಕ್ಷಣಕ್ಕೆ ರೇಣುಕಾಚಾರ್ಯ ಕುಟುಂಬ ಬೇಡ ಜಂಗಮ ಹೆಸರಿನಲ್ಲಿ ಪಡೆದ ಎಸ್ಸಿ ಪ್ರಮಾಣ ಪತ್ರ ವಾಪಸ್ಸು ಪಡೆಯಬೇಕು. ಅವರನ್ನ ಗಡಿ ಪಾರು ಮಾಡಬೇಕು. ಹಾಗೆ ಬಿಟ್ಟರೇ ಅಧಿಕಾರ ಬಳಿಸಿ ಮತ್ತೆ ದಬ್ಬಾಳಿಕೆ ಮಾಡುವ ಸಾದ್ಯತೆ ಇದೆ ಎಂದು ದಲಿತ ಮುಖಂಡರು‌ ಆರೋಪಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

36 ಗಂಟೆಗಳ ಕರ್ಫ್ಯೂ ವಿಧಿಸಿದ ಸರ್ಕಾರ