Publish Date: Wed, 01 Aug 2018 (17:12 IST)
Updated Date: Wed, 01 Aug 2018 (17:30 IST)
ಮಟನ್ ಮಾರ್ಕೆಟ್ ಸ್ಥಳಾಂತರಿಸಿರುವುದನ್ನ ವಿರೋಧಿಸಿ ನಗರಸಭೆ ಎದುರು ಮಟನ್ ಮಾರುಕಟ್ಟೆಯ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಹಾವೇರಿಯಲ್ಲಿ ಮಟನ್ ಮಾರ್ಕೆಟ್ ಸ್ಥಳಾಂತರಿಸಿರುವುದನ್ನ ವಿರೋಧಿಸಿ ನಗರಸಭೆ ಎದುರು ಮಟನ್ ಮಾರುಕಟ್ಟೆಯ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು. ನರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮಗೆ ಇಲ್ಲಿಯವರೆಗೂ ಲೈಸನ್ಸ್ ನೀಡಿಲ್ಲ. ಈಗಿರುವ ಪರವಾನಿಗೆಯನ್ನ ನವೀಕರಣ ಮಾಡಿಲ್ಲ.
ಏಕಾ ಏಕಿ ನಮ್ಮ ವ್ಯಾಪಾರವನ್ನ ಬಂದ್ ಮಾಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮಟನ್ ಮಾರಾಟಗಾರರ ಹೊಟ್ಟೆಯ ಮೇಲೆ ಕಲ್ಲು ಹಾಕುತಿದ್ದಾರೆ. ಕೂಡಲೆ ಮಾರ್ಕೆಟ್ ಸ್ಥಳಾಂತರವನ್ನ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.