Publish Date: Fri, 27 Jul 2018 (16:19 IST)
Updated Date: Fri, 27 Jul 2018 (16:27 IST)
ಶುಭ ಕೆಲಸ ಮಾಡಲು ಪಂಚಾಂಗ ನೋಡುವವರ ವಿರುದ್ಧ ಆ ಖ್ಯಾತ ಸ್ವಾಮೀಜಿಗಳು ಸಮರ ಸಾರಿದ್ದಾರೆ. ಚಿತ್ರದುರ್ಗ ಮುರುಘ ಶರಣರು ಸಮರ ಸಾರಿದ್ದಾರೆ. ಅರೇ ಗಾಬರಿಯಾಗಬೇಡಿ. ಈ ಖ್ಯಾತ ಶ್ರೀಗಳು, ಪಂಚಾಂಗ ನೋಡುವವರ ವಿರುದ್ಧ ಸಮರ ಸಾರಿದ್ದಾರೆ.
ಚಂದ್ರ ಗ್ರಹಣದ ದಿನವೇ ಲಿಂಗ ದೀಕ್ಷೆ ಮತ್ತು ವಿವಾಹ ಕಾರ್ಯ ನಡೆಸಲು ಸಕಲ ಸಿದ್ಧತೆ ನಡೆದಿದೆ. ಇಂದು ರಾತ್ರಿ 9.ಘಂಟೆಯಿಂದ ಆರಂಭವಾಗಲಿರುವ ಶುಭ ಕೆಲಸಗಳಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಗ್ರಹಣ ಕೇವಲ ನೈಸರ್ಗಿಕ ಕ್ರಿಯೆ ಎಂದು ಸಾರಲು ಮುಂದಾದ ಶಿವಮೂರ್ತಿ ಶರಣರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ದೇವಸ್ಥಾನ ಮುಚ್ಚುವ ಮತ್ತು ಶುಭ ಕೆಲಸಕ್ಕೆ ಗ್ರಹಣದ ದಿನ ನಿಷಿಧ್ಧ ಎಂದು ಹೇಳುವ ಮೌಢ್ಯದ ವಿರುಧ್ದ ಶರಣರು ಸಮರ ಸಾರುತ್ತಿದ್ದಾರೆ.