Publish Date: Fri, 30 Nov 2018 (17:15 IST)
Updated Date: Fri, 30 Nov 2018 (17:16 IST)
2019ರ ಲೋಕಸಭಾ ಚುನಾವಣೆಯೊಳಗೆ ರಾಮ ಮಂದಿರ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಬೇಕು ಎಂದು ಶ್ರೀರಾಮ ಸೇನೆ ಆಗ್ರಹ ಮಾಡಿದೆ.
ಧಾರವಾಡದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿಕೆ ನೀಡಿದ್ದು, ನೂರು ಕೋಟಿ ಹಿಂದೂಗಳ ಆಶಯ, ಒತ್ತಾಸೆಯಿದೆ. ಬಿಜೆಪಿಯವರಿಗೆ ಇದರಿಂದ ಲಾಭ ಆಗಿದೆ. ಬಿಜೆಪಿಯವರು ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ. ಅಧಿಕಾರಕ್ಕೂ ಬಂದಿದ್ದಾರೆ. ಈಗ ಇಡೀ ದೇಶದಲ್ಲಿ ಜನರು, ಸಂತರು ಒತ್ತಾಯ ಮಾಡುತ್ತಿದ್ದಾರೆ. ಜನಾಗ್ರಹವಾಗುತ್ತಿದೆ ಎಂದಿದ್ದಾರೆ.
ಜನಾಗ್ರಹಕ್ಕೆ ಬೆಲೆ ಕೊಡದಿದ್ದರೆ ಆಗ ಪ್ರಧಾನಿ ನರೇಂದ್ರ ಮೋದಿ ಹಿಂದುಗಳಿಗೆ ದ್ರೋಹ ಬಗೆದಂತೆ ಆಗುತ್ತದೆ. ವಾಜಪೇಯಿ ಅವರು ಇದ್ದಾಗ ಯಾವುದೇ ರೀತಿ ಇದನ್ನು ಮಾಡಲಿಲ್ಲ. ಅದಕ್ಕೆ ಅವರನ್ನು ಕೆಳಗಿಳಿಸಿದರು. ಉತ್ತರ ಪ್ರದೇಶದಲ್ಲಿ ಪಕ್ಷ ಧೂಳಿಪಟ ಆಗಿ ಹೋಗಿತ್ತು. ಆದರಿಂದ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜನಾಗ್ರಹಕ್ಕೆ ಕೇಂದ್ರ ಸರ್ಕಾರ ಮನ್ನಣೆ ಕೊಡಬೇಕು ಎಂದು ಮುತಾಲಿಕ್ ಆಗ್ರಹ ಮಾಡಿದ್ದಾರೆ.