Select Your Language

Notifications

webdunia
webdunia
webdunia
webdunia

ಜಾರಕಿಹೊಳಿ ವಿರುದ್ಧ ಮುತಾಲಿಕ್ ಆಕ್ರೋಶ

ಜಾರಕಿಹೊಳಿ ವಿರುದ್ಧ ಮುತಾಲಿಕ್ ಆಕ್ರೋಶ
ಶಿವಮೊಗ್ಗ , ಬುಧವಾರ, 9 ನವೆಂಬರ್ 2022 (11:11 IST)
ಶಿವಮೊಗ್ಗ : ಮುಸ್ಲಿಮರ ಮತಕ್ಕಾಗಿ ಹಿಂದೂಗಳಿಗೆ ಅವಹೇಳನ ಮಾಡುತ್ತಿರುವುದು ಅತ್ಯಂತ ನೀಚ ಕೆಲಸ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಂದು ಕಿಡಿ ಕಾರಿದ್ದಾರೆ.
 
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಹಿಂದೂ ಎಂಬ ಪದ ಜಗತ್ತಿನ ತುಂಬ ಹರಡಿಕೊಂಡಿದೆ. ಭಾರತದ ಮುಸ್ಲಿಮರು ಯಾವುದೇ ದೇಶಕ್ಕೆ ಹೋದರೂ, ಹಿಂದೂ ಮುಸ್ಲಿಂ ಎಂದು ಕರೆಯುತ್ತಾರೆ.

ಹೀಗಿರುವಾಗ ಜಾರಕಿಹೊಳಿ ಅವರ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶನ ಮಾಡಿದೆ ಎಂದರು.  ಹಿಂದೂ ಪದ ಅಶ್ಲೀಲ ಅಂತಾ ಜಾರಕಿಹೊಳಿ ಯಾವ ಅರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ಸಿದ್ದರಾಮಯ್ಯ, ಡಿಕೆಶಿ  ಹಾಗೂ ಜಾರಕಿಹೊಳಿ ಅವರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ್ ಎಕ್ಸ್‌ಪ್ರೆಸ್‍ಗೆ ಮೊದಲ ಬಲಿ !