Publish Date: Wed, 09 Nov 2022 (10:57 IST)
Updated Date: Wed, 09 Nov 2022 (10:58 IST)
ಗಾಂಧೀನಗರ : ಗುಜರಾತ್ನ ಆನಂದ್ ಬಳಿ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹರಿದು 54 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆಯನ್ನು ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂದು ಗುರುತಿಸಲಾಗಿದ್ದು, ಆನಂದ್ ರೈಲ್ವೆ ನಿಲ್ದಾಣದ ಬಳಿ ಹಳಿ ದಾಟುತ್ತಿದ್ದಾಗ ಸಂಜೆ 4.37ಕ್ಕೆ ಘಟನೆ ಸಂಭವಿಸಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 30 ರಂದು ಗಾಂಧೀನಗರ ರಾಜಧಾನಿ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ರೈಲಿನ ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಆದರೆ ಅಂದಿನಿಂದ ವಂದೇ ಭಾರತ್ ರೈಲು ಹಲವು ಬಾರಿ ಅಪಘಾತದ ವಿಚಾರಕ್ಕೆ ಸುದ್ದಿ ಮಾಡಿದೆ. ಕಳೆದ ಅಕ್ಟೋಬರ್ ತಿಂಗಳೊಂದರಲ್ಲಿಯೇ ಮೂರು ಬಾರಿ ವಂದೇ ಭಾರತ್ ರೈಲು ಜಾನುವಾರುಗಳಿಗೆ ಡಿಕ್ಕಿ ಹೊಡೆದಿರುವ ಘಟನೆಗಳು ವರದಿಯಾಗಿವೆ.