Publish Date: Fri, 04 Nov 2022 (10:46 IST)
Updated Date: Fri, 04 Nov 2022 (09:47 IST)
ನವದೆಹಲಿ : ಗುಜರಾತ್ನಲ್ಲಿ ಬಿಜೆಪಿ ಈ ಬಾರಿಯೂ ಅಧಿಕಾರ ಹಿಡಿಯಲಿದೆ ಎಂದು ಟೈಮ್ಸ್ ನೌ ವಾಹಿನಿ ತಿಳಿಸಿದೆ. ಆದರೆ ಆಪ್ ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ.
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿ 125- 130 ಸ್ಥಾನವನ್ನು ಗೆಲ್ಲುವ ಮೂಲಕ ಸತತ 7ನೇ ಬಾರಿ ಅಧಿಕಾರಕ್ಕೆ ಏರಲಿದೆ ಎಂದು ತಿಳಿಸಿದೆ. ಕಾಂಗ್ರೆಸ್ 29-33, ಆಪ್ 20-24, ಇತರರು 1-3 ಸ್ಥಾನಗಳನ್ನು ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.
ಹಾಲಿ ವಿಧಾನಸಭೆ ಅವಧಿ ಮುಂದಿನ ವರ್ಷದ ಫೆಬ್ರವರಿ 18ಕ್ಕೆ ಮುಗಿಯಲಿದೆ. ಕಳೆದ ಚುನಾವಣೆಯಲ್ಲಿ ಎನ್ಡಿಎ 99, ಕಾಂಗ್ರೆಸ್ 77 ಸ್ಥಾನ ಗೆದ್ದಿತ್ತು. ನಂತರ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಬಲ 111ಕ್ಕೆ ಹೆಚ್ಚಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಚುನಾವಣೆ ನಡೆಯಲಿದೆ.