ಚಿತ್ರದುರ್ಗಾ: ಫೋಕ್ಸೋ ಕೇಸ್‌ನಲ್ಲಿ ಸಿಲುಕಿರುವ ಚಿತ್ರದುರ್ಗಾದ ಮುರುಘಾ ಮಠದ ಶ್ರೀಗಳಿಗೆ ಇಂದು ಮಹತ್ವದ ದಿನವಾಗಿದೆ. 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮುರುಘಾ ಶ್ರೀ ಪ್ರಕರಣ ಸಂಬಂಧ ಮಹತ್ವದ ತೀರ್ಪು ಇಂದು ಮಧ್ಯಾಹ್ನ 12ರ ಒಳಗೆ ಹೊರಬೀಳಲಿದೆ.
ನ್ಯಾಯಮೂರ್ತಿ ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ಅವರು ತೀರ್ಪನ್ನು ಪ್ರಕಟಿಸಲಿದ್ದಾರೆ.
ಚಿತ್ರದುರ್ಗಾದ ಮುರುಘಾ ಮಠದ ಶ್ರೀಗಳ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧ ಪ್ರಕರಣ ದಾಖಲಾಗಿ 3 ವರ್ಷ ಮೂರು ತಿಂಗಳಾಗಿದೆ. ದಾಖಲಾಗಿರುವ 2 ಪೋಕ್ಸೋ ಪ್ರಕರಣಗಳ ಸಂಬಂಧ ಇಂದು ಮೊದಲ ಪ್ರಕರಣದ ತೀರ್ಪು ಹೊರಬೀಳಲಿದೆ.
ಒಂದು ವೇಳೆ ಈ ಪ್ರಕರಣದಲ್ಲಿ ಮುರುಘಾ ಶ್ರೀ ವಿರುದ್ಧ ಆರೋಪ ಸಾಬೀತಾದಲ್ಲಿ 20 ವರ್ಷಗಳ ಶಿಕ್ಷೆಯನ್ನು ಕೋರ್ಟ್ ವಿಧಿಸುವ ಸಾಧ್ಯತೆಗಳಿದೆ. ಇನ್ನೂ ಪ್ರಕರಣದಲ್ಲಿ ಖುಲಾಷೆಯಾಗುವ ಸಾಧ್ಯತೆಯೂ ಇದೆ. ಕಳೆದ ಕೆಲ ವರ್ಷಗಳಿಂದ ತೀರ್ಪು ಪ್ರಕರಣ ನಿರಂತರ ವಿಚಾರಣೆ ನಡೆದಿದ್ದು, ಇಂದು ನೀಡಲಿರುವ ಕೋರ್ಟಿನ ತೀರ್ಪು ಭಾರೀ ಕುತೂಹಲವನ್ನು ಮೂಡಿಸಲಿದೆ.